ಆರ್ಥಿಕ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಧನಸಹಾಯ

Spread the love

ಆರ್ಥಿಕ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಧನಸಹಾಯ

ಮೈಸೂರು: ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಳಿ ವತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಧನ ಸಹಾಯ ಮಾಡಲಾಯಿತು.

ನಗರದ ಟಿ.ಕೆ.ಲೇಔಟ್ ನಲ್ಲಿರುವ ಕೃಷ್ಣ ಧಾಮ ಆವರಣದಲ್ಲಿ ಬಂಟ್ವಾಳ ಸುಬ್ರಾಯ ಬಳಿಗಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 75 ಮಂದಿ ಅರ್ಹ ಫಲಾನುಭವಿಗಳಿಗೆ ಆಯ್ಕೆ ಮಾಡಿ ಅವರಿಗೆ ಧನಸಹಾಯದ ಚೆಕ್ ನೀಡಿದರು. ಈ ವೇಳೆ ಮಾತನಾಡಿದ ಗೌಡ ಸಾರಸ್ವತ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಮಹೇಶ್ ಕಾಮತ್ ಅವರು ಆರ್ಥಿಕವಾಗಿ ಬಡವರಿರಬಹುದು ಆದರೆ ಗುಣದಿಂದ ಯಾರೋ ಬಡವರ ಆಗಬಾರದು. ಸಮಾಜದಲ್ಲಿ ಆರ್ಥಿಕವಾಗಿ ಬಡವರೆಂದು ವ್ಯಥೆ ಪಡಬೇಕಾಗಿಲ್ಲ. ಬಹಳಷ್ಟು ಆಸ್ತಿಯಿದ್ದರೂ ದಾನ ಧರ್ಮ ಮಾಡಲು ಬಹಳಷ್ಟು ಮಂದಿ ಹಿಂಜರಿಯುತ್ತಾರೆ. ಅವರೇ ನಿಜವಾದ ಬಡವರು. ಮನುಷ್ಯ ಎಷ್ಟು ಕಾಲ ಬದುಕಿದ್ದಾನೆ? ಎಷ್ಟು ಆಸ್ತಿ ಸಂಪಾದಿಸಿದ್ದೇನೆ? ಎನ್ನುವುದು ಮುಖ್ಯ ಅಲ್ಲ. ಕಷ್ಟದಲ್ಲಿರುವವರಿಗೆ ಎಷ್ಟು ನೆರವಾದೆ ಎನ್ನುವುದು ಮುಖ್ಯ. ತಾನು ಮಾಡಿದ ಒಳ್ಳೆಯತನವೇ ಆಸ್ತಿ ಎಂದು ಹೇಳಿದರು.

ಕೊರೊನಾ ದಿಂದಾಗಿ ಸಾಕಷ್ಟು ಪಾಠ ಕಲಿತಿದ್ದೇವೆ. ಯಾರು ಜೀವನದಲ್ಲಿ ಧೃತಿಗೆಡಬೇಡಿ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ವಿದ್ಯಾಭ್ಯಾಸ ಪಿಂಚಣಿ ಇತ್ಯಾದಿ ಸರ್ಕಾರದಿಂದ ಸಾಕಷ್ಟು ಯೋಜನೆಗಳಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಳಿಯ ಅಧ್ಯಕ್ಷರು ರವಿಶಾಸ್ತ್ರಿ, ಎಂ.ಕೆ.ಪುರಾಣಿಕ್, ಜಯರಾಮ್ ಭಟ್, ಸಿ.ಜೆ.ಮೋಹನ್, ಪುಟ್ಟಣ್ಣ ಭಟ್, ಪಿ ಎಸ್ ಶೇಖರ್, ಜಗದೀಶ್ ಭಟ್ ಇನ್ನಿತರರು ಇದ್ದರು.


Spread the love

1 Comment

  1. why don’t you provide reservation percentages to Brahmin students/citizens while government recruitments are similar to the economically weaker sections in the Brahmin community? Let there be an equal opportunity right for every citizen of the nation. If it is already an existing rule then ignore this comment pl…

Comments are closed.