ಆರ್ಯಾಪು ನಿವಾಸಿ ಗೋಪಾಲಕೃಷ್ಣ ಪತ್ತೆಗೆ ಮನವಿ
ಮಂಗಳೂರು: ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಿಂಹವನದ ನಿವಾಸಿ ಗೋಪಾಲಕೃಷ್ಣ (45) ಮೇ 11 ರಂದು ಕಾಣೆಯಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: ಎತ್ತರ ಸುಮಾರು 5.5 ಅಡಿ, ಕಪ್ಪು ಕೂದಲು, ಗೋಧಿ ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿರುತ್ತಾರೆ. ಕನ್ನಡ, ಮರಾಠಿ, ತುಳು ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
