ಆರ್.ಎಸ್.ಎಸ್‌ ಸಮವಸ್ತ್ರ ಸುಡುವ ಸಿದ್ದರಾಮಯ್ಯ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ – ನಯನಾ ಗಣೇಶ್

Spread the love

ಆರ್.ಎಸ್.ಎಸ್‌ ಸಮವಸ್ತ್ರ ಸುಡುವ ಸಿದ್ದರಾಮಯ್ಯ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ – ನಯನಾ ಗಣೇಶ್

ಉಡುಪಿ: ಜಗತ್ತಿನ ಅತೀ ದೊಡ್ಡ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮವಸ್ತ್ರ ಸುಡುವ ಅಭಿಯಾನ ಆರಂಭಿಸುವ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಖಂಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಳೆದ 97 ವರ್ಷಗಳಿಂದ ಸಾಮಾಜಿಕ ಸಂಘಟನೆಯಾಗಿ ಸಮಾಜದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತ ಬಂದಿದೆ. ದೇಶದ ಸಂಕಷ್ಟ ಸಮಯದಲ್ಲಿ ನೆರೆ, ಅವಘಡಗಳಾದಗ ಕೊರೊನಾ ದಂತ ಪರಿಸ್ಥಿತಿ ಯಲ್ಲಿ ಜೀವದ ಹಂಗು ತೊರೆದು ಸ್ವಯಂ ಸೇವಕರು ಸೇವೆ ಸಲ್ಲಿಸಿದ್ದಾರೆ.ಕಾಂಗ್ರೆಸ್ ನ ಇಂತಹ ಅಭಿಯಾನ ಅವರ ಮನಸ್ಥಿತಿಯನ್ನು ತೋರಿಸಲಿದ್ದು, ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಹತಾಶರಾಗಿದ್ದು ವೋಟ್ ಗಾಗಿ ಒಂದು ವರ್ಗವನ್ನು ಓಲೈಕೆ ಮಾಡಲು ಇಂತಹ ಹೇಳಿಕೆ ನೀಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲಿದ್ದಾರೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ


Spread the love