ಆರ್ ಎಸ್ ಬಿ ಭವನ ಮಣಿಪಾಲ: ಶ್ರೀ ಕೈವಲ್ಯ ಮಠಾಧೀಶರ ಭೇಟಿ

Spread the love

ಆರ್ ಎಸ್ ಬಿ ಭವನ ಮಣಿಪಾಲ: ಶ್ರೀ ಕೈವಲ್ಯ ಮಠಾಧೀಶರ ಭೇಟಿ

ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಶ್ರೀಕೈವಲ್ಯ ಮಠಾಧೀಶರಾದ ಶ್ರೀ ಶ್ರಿ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್ ಅವರು ಸುಮಾರು ಐದು ವರ್ಷ ಗಳ ಬಳಿಕ   ತಮ್ಮ ಜನ್ಮನಕ್ಷತ್ರ ಹಾಗೂ ಆತ್ರಾಡಿ ಶಾಖಾ ಮಠವು ಉದ್ಘಾಟನೆಗೊಂಡು ಒಂದು ವರ್ಷ ಪೂರ್ತಿಗೊಂಡಿರುವ ದಿನದಂದು ರಾಜಾಪುರ ಸಾರಸ್ವತ ಸಂಘ ಮಣಿಪಾಲ ಇಲ್ಲಿಗೆ ಭೇಟಿ ನೀಡಿ ನೂತನವಾಗಿ ಆಯ್ಕೆಗೊಂಡ  ಸಂಘದ ಪದಾಧಿಕಾರಿಗಳಿಗೆ ಆಶೀರ್ವದಿಸಿದರು.

ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತನೀಡಲಾಯಿತು.ಪರಮ ಪೂಜ್ಯ ಸ್ವಾಮೀಜಿಯವರ ಪಾದ ಪೂಜೆಯನ್ನು ನೂತನ ಸಮಿತಿಯ ಅಧ್ಯಕ್ಷರಾದ   ಶ್ರೀಶ ನಾಯಕ್ ದಂಪತಿಗಳು ಹಾಗೂ  ನೂತನ ಪದಾಧಿ ಕಾರಿಗಳು ಸಲ್ಲಿಸಿದರು.

ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗೋಕುಲದಾಸ್ ನಾಯಕ್ ಅವರು ಪ್ರಾಸ್ತಾವಿಕ ಮಾತನಾಡಿದರು.

ಪರಮ ಪೂಜ್ಯ ಗುರುಗಳು ತಮ್ಮ ಆಶೀರ್ವಚನ ದಲ್ಲಿ   ಉತ್ತಮ ಆಡಳಿತ ಮಂಡಳಿ ಆಯ್ಕೆ ಆಗಿರುವುದು ಸಂತಸ ವಾಗಿದೆ,ಉತ್ತಮ ಸೇವೆಯನ್ನು ನೀಡಿ ಶ್ರೀ ಭವಾನಿಶಂಕರ ಹಾಗೂ ನಮ್ಮ ಆಶೀರ್ವಾದ ಹಾಗೂ ಪೂರ್ಣಾನುಗ್ರಹ ವಿರುವುದು ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿ ಎಂದು ಆಶೀರ್ವದಿಸಿದರು.

ನೂತನ ಕಾರ್ಯದರ್ಶಿ  ನಿತ್ಯಾನಂದ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು

ಸಂಘದ ಉಪಾಧ್ಯಕ್ಷರಾದ  ಚೇತನ್ ನಾಯಕ್ ಕಾರ್ಕಳ,ಜೊತೆ ಕಾರ್ಯದರ್ಶಿಯಾದ ರಂಜಿತ್ ಕೆ. ಎಸ್. ಪುನಾರು. ಕೋಶಾಧಿಕಾರಿ ಯಾದ ಜಯರಾಮ ಪ್ರಭು ಹಾಗೂ   ಬಂಟಕಲ್ಲೂಶ್ರೀ  ದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ರಾದ ಶಶಿಧರ ವಾಗ್ಲೆ, ನರಸಿಂಹ ದೇವಸ್ಥಾನ ನರಸಿಂಗೆ ಇದರ ಆಡಳಿತ ಮೊಕ್ತೇಸರ ರಾದ   ರಮೇಶ್ ಸಾಲ್ವಾಂಕರ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು


Spread the love