
Spread the love
ಆಳ್ವಾಸ್‍ನ ಓಟಗಾರರ ಸಾಧನೆ: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್
ವಿದ್ಯಾಗಿರಿ (ಮೂಡುಬಿದಿರೆ): ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಫೆ.12ರಂದು ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್‍ಕಂಟ್ರಿ (ಗುಡ್ಡಗಾಡು) ಚಾಂಪಿಯನ್‍ಶಿಪ್‍ನ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಕ್ರಮವಾಗಿ ಚಾಂಪಿಯನ್ ಹಾಗೂ ರನ್ನರ್ ಅಪ್ ಸ್ಥಾನ ಪಡೆದಿದೆ. ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಆರು ವಿದ್ಯಾರ್ಥಿಗಳ ಪೈಕಿ ತಲಾ ಐವರು ಆಳ್ವಾಸ್ ಕಾಲೇಜಿನ ಓಟಗಾರರು.
ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪೂನಂ (ದ್ವಿತೀಯ) ಹಾಗೂ ಬಸಂತಿ (ಐದನೇ) ಸ್ಥಾನ ಪಡೆದಿದ್ದಾರೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಉಪೇಂದ್ರ ಬಲಿಯಾರ್ (ಪ್ರಥಮ) ಹಾಗೂ ಹರೀಶ್ (ತೃತೀಯ) ಸ್ಥಾನ ಪಡೆದಿದ್ದಾರೆ.
ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
Spread the love