ಆಳ್ವಾಸ್‍ನ 10 ಕ್ರೀಡಾಪಟುಗಳು ಪೊಲೀಸ್ ಇಲಾಖೆಯಲ್ಲಿ ನೇಮಕ

Spread the love

ಆಳ್ವಾಸ್‍ನ 10 ಕ್ರೀಡಾಪಟುಗಳು ಪೊಲೀಸ್ ಇಲಾಖೆಯಲ್ಲಿ ನೇಮಕ
 

ಮೂಡುಬಿದಿರೆ: ಈ ಬಾರಿಯ ಪೋಲೀಸ್ ಇಲಾಖೆಯ ನೇಮಕಾತಿಯಲ್ಲಿ, ಕರ್ನಾಟಕ ಸರ್ಕಾರದ ಕ್ರೀಡಾ ಕೋಟಾದಡಿಯಲ್ಲಿ, ವಿವಿಧ ಹುದ್ದೆಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 10 ಜನ ಹಿರಿಯ ವಿದ್ಯಾರ್ಥಿಗಳು ನೇಮಕಗೊಂಡಿದ್ದಾರೆ. ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಆಗಿ ಡೆಕತ್ಲಾನ್ ಕ್ರೀಡಾಪಟು ಅಭಿಷೇಕ್ ಶೆಟ್ಟಿ ಹಾಗೂ 400 ಮೀ ಅಂತರಾಷ್ಟ್ರೀಯ ಓಟಗಾರ್ತಿ ಲಿಖಿತ ನೇಮಕಗೊಂಡಿದ್ದಾರೆ.

ಹೈಜಂಪ್ ಕ್ರೀಡಾಪಟು ಸುಪ್ರಿಯಾ, ಸ್ಪ್ರಿಂಟರ್ ರೋಹಿತ್, ವೇಟ್‍ ಲಿಫ್ಟರ್‍ಗಳಾದ ಪ್ರಖ್ಯಾತ್ ಹಾಗೂ ಯತೀಶ್ ಶೆಟ್ಟಿ ಮತ್ತು ಹ್ಯಾಂಡ್‍ಬಾಲ್ ಆಟಗಾರರಾದ ಬೀರೇಶ್, ಕಿರಣ್ ಚೌಗಲ, ಸಮೀರ್ ಕಣವಿ ಹಾಗೂ ಶುಭಾಕರ್ ಪೋಲೀಸ್ ಕಾನ್‍ಸ್ಟೇಬಲ್ ಆಗಿ ನೇಮಕಗೊಂಡಿದ್ದಾರೆ. ಎಲ್ಲಾ 10 ಮಂದಿ ಕ್ರೀಡಾಪಟುಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತುಸ್ವೀಕಾರ ಯೋಜನೆಯಡಿ ಉಚಿತ ಕ್ರೀಡಾ ತರಬೇತಿ ಹಾಗೂ ಶಿಕ್ಷಣ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಡೆಕತ್ಲಾನ್ ಕ್ರೀಡಾಪಟು ಅಭಿಷೇಕ್ ಶೆಟ್ಟಿ, 6 ಬಾರಿ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದು, 3 ಬಾರಿ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರ 2019ನೇ ಸಾಲಿನ ಏಕಲವ್ಯ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.


Spread the love