
ಆಳ್ವಾಸ್ ನಲ್ಲಿ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಣೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅರ್ಥಪೂರ್ಣವಾಗಿ 73ನೇ ಗಣರಾಜ್ಯೋತ್ಸವನ್ನು ಸರಳವಾಗಿ ಆಚರಿಸಲಾಯಿತು.
ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎನ್ಸಿಸಿ ಪೈಲಟ್ ಗಳೊಂದಿಗೆ ವೇದಿಕೆಗೆ ಆಗಮಿಸಿದ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವರಿಗೆ ಎನ್ಸಿಸಿ ಆರ್ಮಿ ದಳದ ಸೀನಿಯರ್ ಅಂಡರ್ ಆಫೀಸರ್ ಮನೀಶ್ ಛೆತ್ರಿ ಗೌರವ ರಕ್ಷೆ ನೀಡಿದರು. ಆಳ್ವಾಸ್ ಸಾಂಸ್ಕøತಿಕ ತಂಡದ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆಗೆ ದನಿಯಾದರು. ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಡಾ. ವಿನಯ್ ಆಳ್ವ ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕರು, ಎನ್ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ಡಾ ಬಿ. ರಾಜೇಶ್, ಸಬ್ ಲೆಫ್ಟಿನೆಂಟ್ ನಾಗರಾಜ್, ಫ್ಲೈಯಿಂಗ್ ಆಫಿಸರ್ ಪರ್ವೇಜ್, ಎನ್ ಸಿಸಿ ಆರ್ಮಿ ದಳ, ವಾಯು ದಳ ಹಾಗೂ ನೌಕಾ ದಳದ ಕೆಡೆಟ್ ಗಳು, ರೋವರ್ ಹಾಗೂ ರೇಂಜರ್ಸ್ ವಿದ್ಯಾರ್ಥಿಗಳು, ಎನ್ಸಿಸಿ ಅಧಿಕಾರಿಗಳು ಭಾಗವಹಿಸಿದ್ದರು.