
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು- ಕಾಲೇಜು ಡೇ
ಮೂಡುಬಿದಿರೆ: ಕಲಿಕೆಯಲ್ಲಿ ಆಸಕ್ತಿ ಮುಖ್ಯ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಆಸಕ್ತಿದಾಯಕ ವಿಷಯ ಆಯ್ಕೆ ಮಾಡಿಕೊಳ್ಳುವುದು ಉನ್ನತವಾದುದನ್ನು ಸಾಧಿಸಲು ಸಹಕರಿಸುತ್ತದೆ ಎಂದು ಬೆಂಗಳೂರಿನ ಎಕ್ಸ್‍ಸಿಎಲ್ ಟೆಕ್ನಾಲಜಿಯ ಉಪಾಧ್ಯಕ್ಷೆ ವಿನುತಾ ರಾವ್ ಹೇಳಿದರು
ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯು ಶೋಭಾವನ ಆವರಣದಲ್ಲಿ ಇಂದು ಹಮ್ಮಿಕೊಂಡ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಅವರು ಜಾಗತಿಕ ಮಟ್ಟದಲ್ಲಿ ಬದಲಾವಣೆಗೆ ಒಗ್ಗಿಕೊಂಡು ನಿರಂತರ ಕಲಿಕೆಗೆ ಒತ್ತು ನೀಡಬೇಕು ಆಗ ಮಾತ್ರ ಕ್ರಿಯಾಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆ ವಿದ್ಯಾರ್ಥಿಗಳಿಂದ ಹೊರಹೊಮ್ಮಲು ಸಾಧ್ಯ ಎಂದರು.
ಜತೆಗೆ ವಿದ್ಯಾರ್ಥಿಯಾದವನಿಗೆ ಪ್ರಾಕೃತಿಕ ಜಗತ್ತಿನ ಕುರಿತು ಅರಿವಿರಬೇಕು ಆಗ ಮಾತ್ರ ಎಲ್ಲಾ ಕ್ಷೇತ್ರದಲ್ಲೂ ಅಭೂತಪೂರ್ವ ಸಾಧನೆಗೈಯಲು ಆತ ಅರ್ಹನಾಗುತ್ತಾನೆ. ಪ್ರಸ್ತುತ ಆಧುನಿಕ ತಂತ್ರಜ್ಞಾನದಿಂದ ಸಂವಹನ, ಸಂಶೋಧನೆ ಎಲ್ಲವೂ ಸರಳವಾಗಿದೆ. ಮೂವತ್ತು ವರ್ಷಗಳ ಹಿಂದೆ ಇದೆಲ್ಲವೂ ಕಲ್ಪನೆಗೂ ನಿಲುಕದ ಸಂಗತಿಯಾಗಿತ್ತು, ಆದರೆ ಇಂದು ನಾವು ಈ ಬದಲಾವಣೆ ಒಪ್ಪಿದ್ದೇವೆ, ಇನ್ನಷ್ಟು ಅನ್ವೇಷಣೆ ಸ್ವಾಗತಿಸುತ್ತಿದೇವೆ ಇದು ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಸಾಧ್ಯ. ಸರ್.ಎಂ ವಿಶ್ವೇಶ್ವರಯ್ಯನವರ ವ್ಯಕಿತ್ವದಿಂದ ಮೈಸೂರು ಇನ್ನಷ್ಟು ಪ್ರಸಿದ್ಧಿ ಪಡೆಯಿತು. ಎಲ್ಲರೂ ಅವರಂತೆ ಸಾಧನೆ ಮಾಡಬಹುದು ಇಲ್ಲವೆ ಮಾಡದೇ ಇರಬಹುದು. ಆದರೆ ಪ್ರಯತ್ನ ಕಡ್ಡಾಯವಾಗಿ ಮಾಡಬೇಕು. ದೊರೆತ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡೀಸ್, ಕಾಲೇಜಿನ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ರಿಚರ್ಡ್ ಪಿಂಟೋ, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಎಂಬಿ.ಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ನಿರೂಪಿಸಿ, ಪ್ರಾಧ್ಯಾಪಕ ಸುಧೀರ್ ಶೆಟ್ಟಿ ಸ್ವಾಗತಿಸಿ ಡಾ.ಸಿದ್ದೀಶ್ ವಂದಿಸಿದರು
ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ವಿತರಣಾ
ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಾಂಸ್ಕøತಿಕ ಕಾರ್ಯಕ್ರಮ.
ವಿದ್ಯಾರ್ಥಿಗಳಿಂದ ಹಾಡು,ನೃತ್ಯ ಮೈಮ್ ಇನ್ನಿತರ ಮನೋರಂಜನಾ ಕಾರ್ಯಕ್ರಮ ನೆರವೇರಿತು.