ಆಳ್ವಾಸ್ ಕಾಲೇಜಿನಲ್ಲಿ ‘ದಿ ಮ್ಯಾಟ್ರಿಕ್ಸ್- 2023’- ‘ಹೆಚ್ಚು ಪಾಠ ಕಲಿಸುವ ಸೋಲು’

Spread the love

ಆಳ್ವಾಸ್ ಕಾಲೇಜಿನಲ್ಲಿ ‘ದಿ ಮ್ಯಾಟ್ರಿಕ್ಸ್- 2023’- ‘ಹೆಚ್ಚು ಪಾಠ ಕಲಿಸುವ ಸೋಲು’

ವಿದ್ಯಾಗಿರಿ (ಮೂಡುಬಿದಿರೆ): ‘ಜೀವನದಲ್ಲಿ ಸೋಲು ಗೆಲುವಿಗಿಂತ ಹೆಚ್ಚಿನ ಪಾಠವನ್ನು ಕಲಿಸುತ್ತದೆ’ ಎಂದು ಝರಿ ಕೌಟರ್ ಸ್ಥಾಪಕಿ ನಂದಿತಾ ಆಚಾರ್ಯ ಹೇಳಿದರು.

ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಬುಧವಾರ ವ್ಯವಹಾರ ಆಡಳಿತ ಪದವಿ ವಿಭಾಗ ಆಯೋಜಿಸಿದ್ದ ‘ದಿ ಮ್ಯಾಟ್ರಿಕ್ಸ್- 2023’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಲಿಯಲು, ಸ್ಫೂರ್ತಿ ಪಡೆಯಲು, ಗೆಲ್ಲಲು ಉತ್ತಮ ವೇದಿಕೆಯನ್ನು ಅಪೇಕ್ಷಿಸಬಾರದು. ಅದನ್ನು ನಾವೇ ಸೃಷ್ಟಿಸಬೇಕು. ಸೋಲನ್ನು ಕೀಳರಿಮೆಯಿಂದ ಕಾಣಬೇಡಿ. ಏಕೆಂದರೆ ಪ್ರತಿ ಸೋಲಿನಿಂದಲೇ ಗೆಲುವು ಸಾಧ್ಯ’ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಗುರಿ ಎನ್ನುವುದು ಸೋಲು ಗೆಲುವಿನ ಮಿಶ್ರಣ. ನೀವು ಕಲಿಯುವ ಯಾವುದೇ ವಿಷಯವನ್ನು ಸರಳವಾಗಿ ತೆಗೆದುಕೊಳ್ಳದೆ, ಗಂಭೀರವಾಗಿ ತೆಗೆದುಕೊಳ್ಳಿ. ಮೊದಲು ನಿಮ್ಮ ಬಗ್ಗೆ ನೀವೇ ಚೆನ್ನಾಗಿ ಅರಿತುಕೊಳ್ಳಿ. ಸ್ಪರ್ಧೆ ಎನ್ನುವುದು ಕೇವಲ ಒಬ್ಬರ ವಿರುದ್ಧವಾಗಿ ಇನ್ನೊಬ್ಬರ ಭಾಗವಹಿಸುವಿಕೆಯಲ್ಲ. ನಮ್ಮೊಂದಿಗೆ ನಾವೇ ಸ್ಪರ್ಧಿಸುವುದಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಬಿ.ಬಿ.ಎ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಉಪನ್ಯಾಸಕಿ ಅಂಬಿಕಾ.ಕೆ ಮತ್ತು ಪ್ರಜ್ಞಾ ಎಸ್.ಬಿ, ವಿದ್ಯಾರ್ಥಿ ಸಂಯೋಜಕ ಸುಶಾನ್ ಶೆಟ್ಟಿ ಮತ್ತು ಶಾಶ್ವತ್ ರೈ ಇದ್ದರು.

ವಿದ್ಯಾರ್ಥಿನಿ ಭೂಮಿಕಾ ಬಿ.ಎಚ್ ನಿರೂಪಿಸಿ, ಎನ್. ಖತೀಜಾ ಸ್ವಾಗತಿಸಿ, ಅನುಪಮಾ ವಂದಿಸಿದರು.


Spread the love