
ಆಳ್ವಾಸ್ ಬಿಬಿಎಂ ವಿಭಾಗ: ಹಿರಿಯ ವಿದ್ಯಾರ್ಥಿಗಳಿಂದ ಸಂವಾದ ಕಾರ್ಯಕ್ರಮ
ಮೂಡುಬಿದಿರೆ: ಕಾಲೇಜಿನಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೂಂಡು ಉತ್ತಮ ಜೀವನ ನಿರ್ವಹಿಸುವತ್ತಾ ವಿದ್ಯಾರ್ಥಿಗಳು ಹೆಚ್ಚಿನ ಗಮನ ವಹಿಸಬೇಕು ಎಂದು ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ 2019-20 ಸಾಲಿನ ಬಿಬಿಎಂ ರ್ಯಾಂಕ್ ವಿಜೇತರಿಗೆ ನಡೆದ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿ ಜೀವನದಲ್ಲಿ ಸಕಾರಾತ್ಮಕ ಯೋಚನೆಗಳು ಅಗತ್ಯ. ವಿದ್ಯಾರ್ಥಿಗಳ ನಡುವೆ ಜಾತಿ-ಮತಗಳ ಭಿನ್ನಾಬಿಪ್ರಾಯ ಅನಗತ್ಯ. ವಿದ್ಯಾರ್ಜನೆ ಒಂದೇ ವಿದ್ಯಾರ್ಥಿಗಳ ಗುರಿಯಾಗಿರಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಲಭಿಸಿರುವ ಸ್ವಾತಂತ್ರ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅನಗತ್ಯ ವಿಷಯಗಳಲ್ಲಿ ತಮ್ಮ ಸಮಯವನ್ನು ಕಾಲಹರಣ ಮಾಡಬಾರದು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ 2019-2020ನೇ ಸಾಲಿನ ಬಿಬಿಎಂ ಪರೀಕ್ಷೆಯಲ್ಲಿ ಐದನೇ ರ್ಯಾಂಕ್ ಪಡೆದ ಶ್ರೇಯಾ ಕೆ ಶೆಟ್ಟಿ, ಏಳನೇ ರ್ಯಾಂಕ್ ಪಡೆದ ಶ್ರೀಲಕ್ಷ್ಮಿ, ಎಂಟನೇ ರ್ಯಾಂಕ್ ಪಡೆದ ಕೀರ್ತಿ ಎಸ್, ಹತ್ತನೇ ರ್ಯಾಂಕ್ ಪಡೆದ ಓಂಕಾರ್ ಹೆಗ್ಡೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. 2019-2020ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಬೆಂಕ್ ಕಂಪೆನಿಯ ಪ್ರಾಜೆಕ್ಟರ್ನ್ನು ಈ ಸಂಧರ್ಭದಲ್ಲಿ ವಿಭಾಗಕ್ಕೆ ಕೊಡುಗೆಯಾಗಿ ನೀಡಿದರು.
ಬಿಬಿಎಂ ವಿಭಾಗದ ಮುಖ್ಯಸ್ಥೆ ಸುರೇಖಾ, ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಚೈತ್ರಾ ರಾವ್, ಅಂಬಿಕಾ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಸುಶಾನ್ ಶೆಟ್ಟಿ ಸ್ವಾಗತಿಸಿ, ಅಭಿμÉೀಕ್ ವಂದಿಸಿದರು. ವಿಕ್ರಮ್ ಕನ್ವರ್ ಕಾರ್ಯಕ್ರಮ ನಿರೂಪಿಸಿದರು.