ಆಳ್ವಾಸ್ ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗ: ಕ್ರಿಸ್ಮಸ್‍ಗೆ ರೋಯಲ್ ಪ್ಲಮ್ ಕೇಕ್ ತಯಾರಿ

Spread the love

ಆಳ್ವಾಸ್ ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗ: ಕ್ರಿಸ್ಮಸ್‍ಗೆ ರೋಯಲ್ ಪ್ಲಮ್ ಕೇಕ್ ತಯಾರಿ

ಮೂಡುಬಿದಿರೆ: ಆಳ್ವಾಸ್ ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗ ಹಾಗೂ ಆಳ್ವಾಸ್ ಬೇಕ್ ಎಂಪೋರಿಮ್ ಸಹಭಾಗಿತ್ವದಲ್ಲಿ ಕ್ರಿಸ್ಮಸ್ ಹಬ್ಬದ ಪೂರ್ವಭಾವಿಯಾಗಿ 150ಕೆಜಿ ರೋಯಲ್ ಪ್ಲಮ್ ಕೇಕ್‍ನ ‘ಕೇಕ್ ಮಿಕ್ಸಿಂಗ್ ‘ ಕಾರ್ಯಕ್ರಮ ವಿದ್ಯಾಗಿರಿ ಆವರಣದಲ್ಲಿ ಜರುಗಿತು.

ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಕ್ರಿಸ್ಮಸ್ ಕೇಕ್ ಹಾಗೂ ಸ್ವೀಟ್ಸ್‍ಗಳನ್ನು ತಯಾರಿಸುವ ಬಗೆಯನ್ನು ಪ್ರಾಯೋಗಿಕವಾಗಿ ತರಬೇತಿ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ಲಮ್ ಕೇಕ್ ತಯಾರಿಸಲು ಬೇಕಾದ ಪದಾರ್ಥಗಳಾದ ಕ್ಯಾಶ್ಯೂ ನಟ್ಸ್, ಡ್ರೈಫ್ರೂಟ್ಸ್, ಕರ್ಜೂರ, ಟುಟಿ ಫ್ರೂಟಿ, ಶುಂಠಿ, ಸ್ಪೈಸ್ ಪೌಡರ್, ಬ್ರ್ಯಾಂಡಿ, ರಮ್, ವೈನ್ ಬ್ಲೆಂಡೆಡ್ ಸ್ಪೀರಿಟ್ಸ್‍ಗಳನ್ನು ಮಿಶ್ರಣ ಮಾಡಲಾಯಿತು. ಈ ಎಲ್ಲಾ ಮಿಶ್ರಣ ಸರಿಯಾದ ಪ್ರಮಾಣದಲ್ಲಿ ಫರ್ಮನ್ಟೇಶನ್‍ಗೊಳ್ಳಲು ಒಂದು ತಿಂಗಳು ಇಡಲಾಗುತ್ತದೆ. ನಂತರ ಒಂದೊಂದು ಕೆಜಿಯ ಕೇಕ್‍ನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ ಗ್ರೀಷ್ಮಾ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗದ ಮುಖ್ಯಸ್ಥ ಟೊರೆನ್ಸ್ ರೊಡ್ರೀಗಸ್ ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು. ಸುಹಾನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


Spread the love

Leave a Reply

Please enter your comment!
Please enter your name here