ಆಸ್ಕರ್‌ ಶೀಘ್ರ ಗುಣಮುಖರಾಗಲು ಕೋರಿ ಮಂಗಳೂರು ಬಿಷಪ್‌ ಹೌಸ್‌ ಚಾಪೆಲ್‌ ನಲ್ಲಿ ಪ್ರಾರ್ಥನೆ

Spread the love

ಆಸ್ಕರ್‌ ಶೀಘ್ರ ಗುಣಮುಖರಾಗಲು ಕೋರಿ ಮಂಗಳೂರು ಬಿಷಪ್‌ ಹೌಸ್‌ ಚಾಪೆಲ್‌ ನಲ್ಲಿ ಪ್ರಾರ್ಥನೆ

ಮಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡೀಸ್ ಅವರ ಆರೋಗ್ಯ ಸುಧಾರಣೆ ಹಾಗೂ ಶೀಘ್ರ ಗುಣಮುಖರಾಗಲೆಂದು ಹಾರೈಸಲು, ಮಂಗಳೂರು ಬಿಷಪ್ ಹೌಸ್ ಚಾಪೆಲ್ ನಲ್ಲಿ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಸಾರ್ವಜನಿಕ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಯಿತು.

ಪ್ರಾರ್ಥನೆಯನ್ನು ನೆರವೇರಿಸಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳಾದ ಕ್ಲಿಫರ್ಡ್ ಫರ್ನಾಂಡಿಸ್, ಫಾದರ್ ಒನಿಲ್ ಡಿಸೋಜಾ, ಫಾದರ್‌ ಮ್ಯಾಕ್ಸಿಮ್ ರೊಜಾರಿಯೋ, ಫಾದರ್ ಜೆಬಿ ಸಲ್ಮಾನಾ ಆಸ್ಕರ್ ಅವರು ತಮ್ಮ ಸೇವೆಯ ಮೂಲಕ ಈ ದೇಶದ ಎಲ್ಲಾ ವರ್ಗದ ಜನರಿಗೆ ನ್ಯಾಯವನ್ನು ಒದಗಿಸುವ ಮೂಲಕ ದೇವರು ಮೆಚ್ಚುವ ಕೆಲಸವನ್ನು ಮಾಡಿದಂತವರು ಶೀಘ್ರವೇ ಗುಣಮುಖರಾಗಲಿ ಎಂದು ಧರ್ಮಗುರುಗಳು ಧಾರ್ಮಿಕ ನಾಯಕರು ಪ್ರಾರ್ಥಿಸಿದರು.

ಮಾಜಿ ಸಚಿವರುಗಳಾದ ವಿನಯ್‌ ಕುಮಾರ್‌ ಸೊರಕೆ, ವಿಧಾನ ಪರಿಷತ್ತಿನ ಶಾಸಕರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಕಾರ್ಯದರ್ಶಿಗಳಾದ ಪಿವಿ ಮೋಹನ್, ಕಾರ್ಪೊರೇಟರ್ ಗಳಾದ ನವೀನ್ ಡಿಸೋಜ, ಲ್ಯಾನ್ಸಿ ಲೊಟ್ಟೆ ಪಿಂಟೊ, ಕೆಪಿಸಿಸಿ ಕಾರ್ಯದರ್ಶಿ ಎಮ್ ಎ ಗಫೂರ್, ಉಡುಪಿ ಜಿಲ್ಲಾ ಅಧ್ಯಕ್ಷ ಅಶೋಕ್ ಕಡವೂರು, ಕ್ರೈಸ್ತ ಸಮುದಾಯದ ಪ್ರಮುಖ ನಾಯಕರುಗಳಾದ ಗಿಲ್ಬರ್ಟ್ ಡಿಸೋಜ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆಶಿಕ್ ಜಿ ಪೀರಿರಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಪಿಯುಸ್ ಮೊಂತೆರೋ, ಸೌತ್ ಬ್ಲಾಕ್ ಅಲ್ಪಸಂಖ್ಯಾತರ ಅಧ್ಯಕ್ಷರಾದ ಐವನ್ ಡಿಸೋಜಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply