ಆಸ್ಕರ್ ಫರ್ನಾಂಡಿಸ್ ಚೇತರಿಕೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪೂಜೆ

Spread the love

ಆಸ್ಕರ್ ಫರ್ನಾಂಡಿಸ್ ಚೇತರಿಕೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪೂಜೆ

ಉಡುಪಿ: ಮಾಜಿ ಕೇಂದ್ರ ಸಚಿವರು, ರಾಜ್ಯಸಭಾ ಸದಸ್ಯರು, ಹಿರಿಯ ಕಾಂಗ್ರೆಸ್ ನಾಯಕರಾದ   ಆಸ್ಕರ್ ಫರ್ನಾಂಡಿಸ್ ಅವರು ಅನಾರೋಗ್ಯರಾಗಿದ್ದು ಅವರು ಶೀಘ್ರವಾಗಿ ಗುಣಮುಖರಾಗಿ ಬರಲೆಂದು ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಉಡುಪಿ ಅನಂತೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಪದಾಧಿಕಾರಿಗಳು ಸದಸ್ಯರು ರಥಬೀದಿಯಲ್ಲಿರುವ ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಕೆ ಮಾಡಿದರು. ಆಸ್ಕರ್ ಫೆರ್ನಾಂಡಿಸ್ ಶೀಘ್ರ ಚೇತರಿಕೆ ಯಾಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಲಾಯಿತು.

ಸುಮಾರು 50 ವರ್ಷಗಳ ಕಾಲ ರಾಷ್ಟ್ರರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಆಸ್ಕರ್ ಫೆರ್ನಾಂಡಿಸ್, ಪಕ್ಷಬೇಧ ಮರೆತು ಕೆಲಸಮಾಡಿದವರು. ಇನ್ನಷ್ಟು ಕಾಲ ಅವರ ಸೇವೆ ದೇಶಕ್ಕೆ ಸಿಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು.

ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಅಶೋಕ್‌ ಕುಮಾರ್‌ ಕೊಡವೂರು, ಉಪಾಧ್ಯಕ್ಷರಾದ ಪ್ರಖ್ಯಾತ್‌ ಶೆಟ್ಟಿ, ನಗರಸಭೆಯ ವಿಪಕ್ಷ ನಾಯಕ ರಮೇಶ್‌ ಕಾಂಚನ್‌, ಪಕ್ಷದ ಪದಾಧಿಕಾರಿಗಳಾದ ಜ್ಯೋತಿ ಹೆಬ್ಬಾರ್‌, ಹರೀಶ್‌ ಕಿಣಿ, ಮುರಳಿ ಶೆಟ್ಟಿ, ಕುಶಲ ಶೆಟ್ಟಿ, ಅಣ್ಣಯ್ಯ ಸೇರಿಗಾರ್‌, ಸತೀಶ್‌ ಅಮೀನ್‌ ಪಡುಕೆರೆ, ಮೀನಾಕ್ಷಿ ಮಾಧವ ಬನ್ನಂಜೆ, ಗನೇಶ್‌ ನೇರ್ಗಿ, ಗನೇಶ್‌ ರಾಜ್‌ ಸರಳೆಬೆಟ್ಟು, ಜನಾರ್ಧನ ಭಂಡಾರ್ಕರ್‌, ಯತೀಶ್‌ ಕರ್ಕೇರಾ, ಕೃಷ್ಣಮೂರ್ತಿ ಆಚಾರ್ಯ, ಹಾಗೂ ಇತರರು ಉಪಸ್ಥಿತರಿದ್ದರು.


Spread the love