ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಮಂಗಳೂರು ಬಿಷಪ್ ಸಂತಾಪ

Spread the love

ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಮಂಗಳೂರು ಬಿಷಪ್ ಸಂತಾಪ

ಮಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ, ಶ್ರೀ ಆಸ್ಕರ್ ಫೆರ್ನಾಂಡಿಸ್ ರವರ ನಿಧನಕ್ಕೆ ಮಂಗಳೂರು ಧರ್ಮಪ್ರಾಂತ್ಯ ದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾರವರು ಸಂತಾಪ ಸೂಚಿಸಿದ್ದಾರೆ.

ಅವರ ರಾಜಾಕೀಯ ಜೀವನದಲ್ಲಿ, ಕರಾವಳಿಯ ಜನತೆಗೆ ಪ್ರತ್ಯೇಕವಾಗಿ ಮಂಗಳೂರಿನ ಜನತೆಗೆ ಜಾತಿ,ಮತ ಲೆಕ್ಕಿಸದೆ ಅನನ್ಯ ಸೇವೆ ಸಲ್ಲಿಸಿದ್ದರು. ರಾಷ್ಟ್ರ ರಾಜಾಕಾರಣದಲ್ಲಿ, ನಮ್ಮನ್ನು ಪ್ರತಿನಿದಿಸಿದ್ದ ಒಬ್ಬ ಉತ್ತಮ ವ್ಯಕ್ತಿಯನ್ನು ನಾವಿಂದು ಕಳಕೊಂಡಿದ್ದೇವೆ.

ಅವರ ಪತ್ನಿ  ಬ್ಲೊಸಮ್ ಆಸ್ಕರ್ ಫೆರ್ನಾಂಡಿಸ್ ಅವರ ಮಕ್ಕಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನವನ್ನು ಕೋರುತ್ತೇನೆ ಹಾಗೂ ಶ್ರೀ ಆಸ್ಕರ್ ಫೆರ್ನಾಂಡಿಸ್ ರವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ನೀಡಲಿ ಎಂದು ಬೇಡುತ್ತೇನೆ ಎಂದು ಅವರು ಹೇಳಿದ್ದಾರೆ.


Spread the love