ಆ. 19: ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ಸಮಾವೇಶ

Spread the love

ಆ. 19: ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ಸಮಾವೇಶ

ಉಡುಪಿ: ಆ.19ರಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ನಡೆಯಲಿದೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಶಯದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಚಲಿತಗೊಳಿಸುವ ನಿಟ್ಟಿನಲ್ಲಿ ‘ಜನಾಶೀರ್ವಾದ ಯಾತ್ರೆ’ಯನ್ನು ಆ.16ರಿಂದ ಆರಂಭಿಸಲಾಗಿದ್ದು, 19ರಂದು ಕೇಂದ್ರ ಸಚಿವೆ ಶೋಭಾ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಾಲ್ಕು ಕೇಂದ್ರ ಸಚಿವರ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ನಡೆಯುತ್ತಿದೆ. ಉಡುಪಿ ಜಿಲ್ಲೆಗೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಆ.18ರಂದು ಸಂಜೆ ಹೆಬ್ರಿಗೆ ಯಾತ್ರೆ ಬರಲಿದೆ. ಈ ಸಂದರ್ಭ ಜಿಲ್ಲಾ ಬಿಜೆಪಿಯಿಂದ ಸಚಿವರಿಗೆ ಹಾಗೂ ಜನಾಶೀರ್ವಾದ ಯಾತ್ರೆಗೆ ಸ್ವಾಗತ ಕೋರಲಾಗುವುದು ಎಂದರು.

19ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 11ಕ್ಕೆ ನಗರದ ಪುರಭವನದಲ್ಲಿ ಜನಾಶೀರ್ವಾದ ಯಾತ್ರೆಯ ಸಮಾವೇಶ ನಡೆಯಲಿದೆ. ಸಚಿವರಿಗೆ ಅಭಿನಂದನಾ ಸಮಾರಂಭ ಕೂಡ ಆಯೋಜಿಸಲಾಗಿದೆ. ಸಚಿವರು, ಶಾಸಕರು, ಮುಖಂಡರು ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಕುಯಿಲಾಡಿ ಹೇಳಿದ್ದಾರೆ.

ಕಾರ್ಯಕ್ರಮ ವಿವರ

ಆಗಸ್ಟ್ 18, ಬುಧವಾರ:
ಸಂಜೆ 7.15ಕ್ಕೆ: ಹೆಬ್ರಿಯಲ್ಲಿ ಸ್ವಾಗತ
ಸಂಜೆ 8.30ಕ್ಕೆ: ಹಿರಿಯಡ್ಕದಲ್ಲಿ ಸ್ವಾಗತ
ಸಂಜೆ 9.30ಕ್ಕೆ: ಉಡುಪಿ ಜಿಲ್ಲಾ ಬಿಜೆಪಿ ಕಛೇರಿಗೆ ಬೇಟಿ
ರಾತ್ರಿ 10.00ಕ್ಕೆ: ಭೋಜನ – ಉಡುಪಿಯಲ್ಲಿ ವಾಸ್ತವ್ಯ

ಆಗಸ್ಟ್ 19, ಗುರುವಾರ:
ಬೆಳಿಗ್ಗೆ 8.00ಕ್ಕೆ: ಉಡುಪಿ ಶ್ರೀಕೃಷ್ಣ ಮಠ ಸಂದರ್ಶನ
ಬೆಳಿಗ್ಗೆ 8.30ಕ್ಕೆ: ಸ್ವಾಮೀಜಿಯವರ ದರ್ಶನ
ಬೆಳಿಗ್ಗೆ 9.30ಕ್ಕೆ: ಉಪಹಾರ
ಬೆಳಿಗ್ಗೆ 10.00ಕ್ಕೆ: ಪತ್ರಿಕಾ ಗೋಷ್ಠಿ (ಉಡುಪಿ ಡಯಾನಾ ಹೋಟೆಲ್)
ಬೆಳಿಗ್ಗೆ 10.30ಕ್ಕೆ: ಉಡುಪಿ ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕದಲ್ಲಿ ಪುಷ್ಪಾರ್ಚನೆ
ಬೆಳಿಗ್ಗೆ 11.00ಕ್ಕೆ: ಲಸಿಕಾ ಕೇಂದ್ರಕ್ಕೆ ಬೇಟಿ
ಬೆಳಿಗ್ಗೆ 11.30ಕ್ಕೆ: ಉಡುಪಿ ಪುರಭವನದಲ್ಲಿ ‘ಜನಾಶೀರ್ವಾದ ಯಾತ್ರೆ ಸಮಾವೇಶ’ ಮತ್ತು ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆಯವರ ಅಭಿನಂದನಾ ಸಮಾರಂಭ
ಮಧ್ಯಾಹ್ನ 1.00ಕ್ಕೆ: ಕೇಂದ್ರ ಸರಕಾರದ ವಿವಿಧ ಯೋಜನೆಗಳ ಆಯ್ದ ಫಲಾನುಭವಿಗಳೊಂದಿಗೆ ಸಂವಾದ – ಭೋಜನ (ಮಿನಿ ಟೌನ್ ಹಾಲ್, ಉಡುಪಿ)
ಮಧ್ಯಾಹ್ನ 2.00ಕ್ಕೆ: ಬ್ರಹ್ಮಾವರದ ಪಡಿತರ ವಿತರಣಾ ಕೇಂದ್ರಕ್ಕೆ ಬೇಟಿ
ಮಧ್ಯಾಹ್ನ 3.00ಕ್ಕೆ: ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ


Spread the love