ಇಂದಿನಿಂದ ರಂಜಾನ್ ಉಪವಾಸ ಆಚರಣೆ: ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ

Spread the love

ಇಂದಿನಿಂದ ರಂಜಾನ್ ಉಪವಾಸ ಆಚರಣೆ: ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ
 

ಬೆಂಗಳೂರು: ಮುಸ್ಲಿಮರ ಪವಿತ್ರ ರಂಜಾನ್ ಮಾಸ ಇಂದಿನಿಂದ (ಶುಕ್ರವಾರ) ಆರಂಭಗೊಳ್ಳಲಿದ್ದು, ಇನ್ನೊಂದು ತಿಂಗಳು ಉಪವಾಸ ಆಚರಣೆ ನಡೆಯಲಿದೆ.

ಮೊದಲ ಉಪವಾಸ ಆಚರಿಸುವ ಮುಸ್ಲಿಮರು ಸೂರ್ಯಾಸ್ತದ ಬಳಿಕ ‘ಇಫ್ತಾರ್‌’ ಮೂಲಕ ಉಪವಾಸ ತೊರೆವರು.ರಾತ್ರಿ ಮಸೀದಿಗಳಿಗೆ ತೆರಳಿ ನಮಾಜ್‌ನಲ್ಲಿ ಪಾಲ್ಗೊಳ್ಳುವರು.

ರಂಜಾನ್ ಉಪವಾಸ ಆಚರಣೆ ಪ್ರಯುಕ್ತ ಶುಭಾಶಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ರಂಜಾನ್ ಮಾಸದ ಶುಭಾಶಯಗಳು. ಈ ಪವಿತ್ರ ತಿಂಗಳು ನಮ್ಮ ಸಮಾಜದಲ್ಲಿ ಹೆಚ್ಚಿನ ಏಕತೆ ಮತ್ತು ಸಾಮರಸ್ಯವನ್ನು ತರಲಿ. ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ’ ಎಂದು ಟ್ವೀಟ್ ಮಾಡಿದ್ದಾರೆ.


Spread the love