ಇಂದಿರಾ ಗಾಂಧಿಯಂತಹ ಪ್ರಧಾನಿ ಮತ್ತೊಬ್ಬರು ಬಂದಿಲ್ಲ: ಶಕುಂತಳಾ ಶೆಟ್ಟಿ

Spread the love

ಇಂದಿರಾ ಗಾಂಧಿಯಂತಹ ಪ್ರಧಾನಿ ಮತ್ತೊಬ್ಬರು ಬಂದಿಲ್ಲ: ಶಕುಂತಳಾ ಶೆಟ್ಟಿ

ಮಂಗಳೂರು: ಮಹಿಳೆಯರು ತಾಯಾರು ಮಾಡುವ ಗೃಹತ್ಪೋನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಹಿಳಾ ಉತ್ಪನ್ನಗಳ ಮಾರಾಟ ಮತ್ತು ವಸ್ತು ಪ್ರದರ್ಶನವನ್ನು ಏರಪಾಡು ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು.

ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಕೆ. ಶಕುಂತಳಾ ಶೆಟ್ಟಿ ಅವರು, ಇಂದಿರಾ ಗಾಂಧಿಯಂತಹ ಅಪ್ರತಿಮ ಆಡಳಿತಗಾರ್ತಿ ಪ್ರಧಾನ ಮಂತ್ರಿ ಭಾರತದಲ್ಲಿ ಮತ್ತೊಬ್ಬರು ಬಂದಿಲ್ಲ ಎಂದು ಅವರು ಹೇಳಿದರು.

ಮಹಿಳೆಯರು ಮನಸ್ಸಿ ಮಾಡಿದರೆ ಯಾವುದೇ ಸಾಧನೆಯನ್ನು ಮಾಡಬಲ್ಲರು. ಭಾರತದಲ್ಲಿ ಬಾಹ್ಯಕಾಶ ಯಾನ ಮಾಡಿದವರಲ್ಲಿ ಇಬ್ಬರು ಹೆಣ್ಣು ಮಕ್ಕಳು. ಹೆಣ್ಣು ಸಮಾಜ ಕಣ್ಣು ಮಾತ್ರವಲ್ಲದೆ, ಪ್ರತಿ ಮನೆಯಲ್ಲಿ ಹದಿನೆಂಟು ಕೆಲಸ ಮಾಡಬಲ್ಲವಳು ಹೆಣ್ಣು ಎಂದರು.

ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಸುರೇಖ ಚಂದ್ರಹಾಸ್, ಮಲ್ಲಿಕ ಪಕ್ಕಳ, ಶೋಭಾ ಕೇಶವ್, ಶಶಿಕಲಾ, ಗೀತಾ ಅತ್ತಾವರ, ಶಾಂತಲ ಗಟ್ಟಿ, ಚಂದ್ರಕಲಾ, ನಮಿತಾ ಡಿ ರಾವ್, ಸಬಿತಾ ಮಿಸ್ಕಿತ್, ನಂದಾ ಪಾಯಸ್, ಜೆಸಿಂತಾ ಆಲ್ಫ್ರೆಡ್, ಚಂದ್ರಿಕಾ ರೈ, ತನ್ವೀರ್ ಶಾ, ಸೌಮ್ಯಲತಾ, ಸಂಜನಾ ಛಲವಾದಿ, ಪೃಥ್ವಿ ಕೋಟ್ಯಾನ್, ಸುನಿತಾ, ವೃಂದಾ ಪೂಜಾರಿ, ಲವಿಲಾ ಮೋರಾ, ಎಸ್.ಕೆ ಸುಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿಯಿಂದ ತೊಡಗಿ ಕರಾವಳಿಯ ಗೋಡಂಬಿ ಜ್ಯೂಸ್, ಆರೋಗ್ಯ ಉತ್ತಮಗೊಳಿಸುವ ಸಾವಯವ ಉತ್ಪನ್ನಗಳು, ಮಹಿಳೆಯರ ಶೃಂಗಾರ ಸಾಧನೆಗಳು, ಮನೆಯಲ್ಲೆ ತಯಾರಿಸಲಾದ, ಸಿದ್ಧ ಉಡುಪು, ಮಹಿಳೆಯರು ಮನೆಯಲ್ಲೆ ತಯಾರಿಸಿ ಮಾರಾಟ ಮಾಡುವ ವಿವಿಧ ಮಸಾಲೆ ಉತ್ಪನ್ನಗಳು, ಮಹಿಳೆಯರು ನಡೆಸುವ ನೇರ ಮಾರುಕಟ್ಟೆ ಕಂಪೆನಿಯ ಪ್ರಾಡಕ್ಟ್ ಗಳ ಸ್ಟಾಲುಗಳು ಗಮನ ಸೆಳೆದವು. ಮಂಗಳೂರಿನ ಹವ್ಯಾಸಿ ಚಿತ್ರಕಲಾವಿದೆ ಮನಾಲಿ ಅವರು ಸ್ಪಾಟ್ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದರು. ಮನಾಲಿ ರಚಿಸಿದ ಹಲವು ಚಿತ್ರಗಳು ವಿಕ್ರಯವಾದವು.

ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಹಿಳಾ ಉದ್ಯಮಿಗಳಿಗೆ, ಕಾರ್ಯಕರ್ತರಿಗೆ ಶುಭ ಹಾರೈಸಿದರು. ಉತ್ತರ ಕರ್ನಾಟಕ ಶೈಲಿಯ ಪಾಯಸ ಸವಿದರು.


Spread the love