ಇಂದಿರಾ ಗಾಂಧಿ ಪುಣ್ಯತಿಥಿ – ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Spread the love

ಇಂದಿರಾ ಗಾಂಧಿ ಪುಣ್ಯತಿಥಿ – ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಉಡುಪಿ: ಭಾರತದ ಮೊದಲ ಮಹಿಳಾ ಪ್ರಧಾನಿ, ದಿಟ್ಟ ಹಾಗೂ ಉಕ್ಕಿನ ಮಹಿಳೆ, ಕೋಟ್ಯಂತರ ಜನರಿಗೆ ಸದಾ ಪ್ರೇರಣೆಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಹಾಗೂ ದೇಶದ ಏಳಿಗೆಗಾಗಿ ದುಡಿದ ನಾಯಕ, ಏಕತೆಯಲ್ಲೇ ದೇಶದ ಅಭಿವೃದ್ಧಿ ಅಡಗಿದೆ ಎಂಬ ವಿಚಾರವನ್ನು ಜಗತ್ತಿಗೆ ಸಾರಿ ಅದನ್ನು ಕಾರ್ಯರೂಪಕ್ಕೆ ತರಲು ಹೋರಾಡಿದವರು, ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ದರಾದ ಶ್ರೀ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜಯಂತಿಯಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ನಂತರ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ಪ್ರಾಯೋಜಕತ್ವದಲ್ಲಿ ಉಡುಪಿ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಹಾಗೂ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ ತಾಯಂದಿರಿಗೆ ಹಾಗೂ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಾಯಕರಾದ ಅಶೋಕ್ ಕುಮಾರ್ ಕೊಡವೂರು, ಗೀತಾ ವಾಘ್ಲೆ, ಎಂ ಎ ಗಫೂರ್, ರಮೇಶ್ ಕಾಂಚನ್, ದಿನೇಶ್ ಪುತ್ರನ್, ಮುರಳಿ ಶೆಟ್ಟಿ, ನರಸಿಂಹಮೂರ್ತಿ, ಫಾ. ವಿಲಿಯಮ್ ಮಾರ್ಟಿಸ್, ವೆರೋನಿಕಾ ಕರ್ನೆಲೀಯೋ, ಮೀನಾಕ್ಷಿ ಮಾಧವ ಬನ್ನಂಜೆ, ಹರೀಶ್ ಕಿಣಿ, ಪುಷ್ಪಾ ಅಂಚನ್, ಜ್ಯೋತಿ ಹೆಬ್ಬಾರ್, ಅಮೃತ್ ಶೆಣೈ, ಕೀರ್ತಿ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಸುಕನ್ಯಾ ಪೂಜಾರಿ, ಚಂದ್ರಿಕಾ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಶಬರೀಶ್ ಸುವರ್ಣ, ಐರಿನ್ ಆಂದ್ರಾದೆ, ಜಯಕುಮಾರ್, ಗೋಪಿ ನಾಯ್ಕ್, ಪ್ರಮೀಳಾ ಸುವರ್ಣ, ಜಯಶ್ರೀ ಶೇಟ್, ಸುಮನಾ ಆಚಾರ್ಯ, ಉಪೇಂದ್ರ ಮೆಂಡನ್, ಉಪೇಂದ್ರ ಗಾಣಿಗ, ರಾಜೇಶ್ ನಾಯ್ಕ್, ಸಾಯಿರಾಜ್, ಗಣೇಶ್, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಾದ ಡಾ. ಮಧುಸೂದನ್ ನಾಯಕ್, ಡಾ. ವೀಣಾ ಕುಮಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರಾಜಗೋಪಾಲ್ ಭಂಡಾರಿ ಅವರು ಉಪಸ್ಥಿತರಿದ್ದು ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು


Spread the love

Leave a Reply

Please enter your comment!
Please enter your name here