ಇಂದಿರಾ ಗಾಂಧಿ ಬಡವರ ಪಾಲಿನ ಕಣ್ಮಣಿ -ಮಾಜಿ ಸಚಿವ ಬಿ.ರಮಾನಾಥ ರೈ

Spread the love

ಇಂದಿರಾ ಗಾಂಧಿ ಬಡವರ ಪಾಲಿನ ಕಣ್ಮಣಿ -ಮಾಜಿ ಸಚಿವ ಬಿ.ರಮಾನಾಥ ರೈ

ಮಂಗಳೂರು: ದೇಶದ ಪ್ರಧಾನಿಯಾಗಿದ್ದಾಗ ಇಂದಿರಾ ಗಾಂಧಿ ಅವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರ ಪಾಲಿಗೆ ಕಣ್ಮಣಿಯಾಗಿದ್ದರು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸ್ಮರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರಧಾರ್ ವಲ್ಲಭಾಯಿ ಪಟೇಲ್ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿರಾ ಗಾಂಧಿ ಅವರು ಅಧಿಕಾರಕ್ಕೆ ಬಂದ ಬಳಿಕ ಸಮಾಜದ ದುರ್ಬಲ ವರ್ಗಕ್ಕಾಗಿ ಹೋರಾಟ ಮಾಡಿದರು. ಇಂದಿರಾ ಅವರು ದೇಶಕ್ಕೋಸ್ಕರ ಪ್ರಾಣತ್ಯಾಗ ಮಾಡಿದನ್ನು ಇಂದು ಸಂಘಪರಿವಾರ ಅರ್ಥಮಾಡಿಕೊಳ್ಳಬೇಕು. ದೇಶದಲ್ಲಿ ಭಯೋತ್ಪಾದನೆಗೆ ಮೊದಲು ಆಹುತಿಯಾಗಿದ್ದರೆ ಅದು ಕಾಂಗ್ರೆಸ್ ಮುಖಂಡರು ಎಂದರು.

ವಲ್ಲಭಾಯಿ ಪಟೇಲರು ಪ್ರಧಾನಮಂತ್ರಿ ಆಗಬೇಕಿತ್ತು. ಅವರಿಗೆ ಮೋಸ ಮಾಡಲಾಗಿತ್ತೆಂದು ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು. ತುರ್ತುಪರಿಸ್ಥಿ ಸಂದರ್ಭದಲ್ಲಿ ಇಂದಿರಾ ಅವರು ಬಡವರಿಗೆ ಬೇಕಾದ ಅನೇಕ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಜಾರಿಗೆ ತರಲು ಸಾಧ್ಯವಾಯಿತು ಎಂದು ತಿಳಿಸಿದರು.

ಇಂದಿರಾ ಅವರು ದೇಶದ ಶಕ್ತಿಯಾಗಿದ್ದರು. ಸೋವಿತ್ ಒಕ್ಕೂಟ ಇದ್ದಾಗ ಇಂದಿರಾ ಅವರು 20 ವರ್ಷಗಳು ಮಿಲಿಟರ್ ಒಪ್ಪಂದ ಮಾಡಿದ್ದರು. ದೇಶಪ್ರೇಮದ ಬಗ್ಗೆ ಬೇರೆ ಪಕ್ಷದವರು ಪಾಠ ಮಾಡುವ ಅಗತ್ಯವಿಲ್ಲ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮನ.ಪಾ. ವಿಪಕ್ಷ ನಾಯಕ ಅಬ್ದುಲ್ ರವೂಫ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಜಿ.ಪಂ.ಸದಸ್ಯ ಶಾಹುಲ್ ಹಮೀದ್, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಮೋಹನ್ ಗೌಡ, ಎನ್ ಎಸ್ ಐಯು ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಪದ್ಮನಾಭ ನರಿಂಗಾನ, ನೀರಜ್ ಚಂದ್ರ ಪಾಲ್, ಸೇವಾದಳದ ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ಪ್ರತಿಭಾ ಕುಳಾಯಿ, ಅಬ್ದುಲ್ ಲತೀಫ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ಶುಭೋದಯ ಆಳ್ವ, ನವೀನ್ ಡಿಸೋಜಾ, ವಿಶ್ವಾಸ್ ದಾಸ್, ತೆರೆಝಾ ಪಿಂಟೊ, ಪದ್ಮನಾಭ ಅಮೀನ್, ಶೋಭಾ ಕೇಶವ್, ಟಿ.ಕೆ.ಸುಧೀರ್, ಜಯಶೀಲ ಅಡ್ಯಂತಯಾ, ಮೊಹಮ್ಮದ್ ಕುಂಜತ್ತಬೈಲ್, ರಮಾನಂದ ಪೂಜಾರಿ, ಲ್ಯಾನ್ಸಿ ಲೋಟೊ ಪಿಂಟೊ, ಜಿಸಿಂತಾ ವಿಜಯ್ ಆಲ್ಫ್ರೆಡ್, ಅಖಿಲ ಆಳ್ವ, ಶಬ್ಬೀರ್ ಸಿದ್ದಕಟ್ಟೆ, ಸಿ.ಎಂ. ಮುಸ್ತಫಾ, ಉದಯ ಕುಂದರ್, ಅನ್ಸಾರ್ ಸಾಲಿಮಾರ್, ನಮೀತಾ ಡಿ ರಾವ್, ಭರತೇಶ್ ಅಮೀನ್, ಲಕ್ಷ್ಮೀನಾಯರ್, ಶೈಲಜಾ ಅಮರನಾಥ್ ಗೌಡ, ಯೋಗೀಶ್ ನಾಯಕ್, ಸಬಿತಾ ಮಿಸ್ಕಿತ್, ಸುಧಾಕರ್, ರಘುರಾಜ್ ಕದ್ರಿ, ಪ್ರತೀಬ್ ಬೇಕಲ್, ಯೂಸುಫ್ ಉಚ್ಚಿಲ ಉಪಸ್ಥಿತರಿದ್ದರು.

ಸದಾಶಿವ್ ಉಳ್ಳಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ಹೆಗ್ಡೆ ವಂದಿಸಿದರು.


Spread the love