ಇನಾಯತ್ ಅಭಿಮಾನಿ ಬಳಗ ಗುರುಪುರ ವಲಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the love

ಇನಾಯತ್ ಅಭಿಮಾನಿ ಬಳಗ ಗುರುಪುರ ವಲಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಇನಾಯತ್ ಅಭಿಮಾನಿ ಬಳಗ ಗುರುಪುರ ವಲಯ ವತಿಯಿಂದ ಗಂಜಿಮಠದ ಒಂಡೇಲಾ ಹಾಲ್‌ನಲ್ಲಿ ಹಮ್ಮಿಕೊಂಡ ಜನಸ್ನೇಹಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಲು ಸಹಕರಿಸಿದ, ಕಾರ್ಯಾಚರಿಸಿದ ಅಭಿಮಾನಿ ಬಳಗದ ಎಲ್ಲಾ ಸದಸ್ಯರಿಗೆ ಹಾಗೂ ಸ್ಥಳೀಯರಿಗೆ ಅಭಿನಂದನಾ ಕಾರ್ಯಕ್ರಮವು ಗಂಜಿಮಠ ಝಾರಾ ಹಾಲ್‌ನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ರವರ ನೇತೃತ್ವದಲ್ಲಿ ನಡೆಯಿತು.

ಸಮಾಜದ ಎಲ್ಲಾ ವರ್ಗದ ಜನರಿಗೆ ನೆರವಾಗಲು, ಅವರ ಅಹವಾಲುಗಳಿಗೆ ಸ್ಪಂದಿಸಲು ಮುಂದಿನ ದಿನಗಳಲ್ಲಿ ಯೋಜನೆಯನ್ನು ರೂಪಿಸಲಾಗುವುದು. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲರೂ ಒಂದಾಗಿ ಶ್ರಮಿಸೋಣ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಇನಾಯತ್ ಅಲಿ ರವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ನೌಷಾದ್ ಹಾಜಿ ಸೂರಲ್ಪಾಡಿ, ಅಬ್ದುರ್ರಹ್ಮಾನ್ ವಂಡೇಲಾ, ಗ್ರಾಮ ಪಂಚಾಯತ್ ಸದಸ್ಯರಾದ ಅನಿತಾ ಡಿಸೋಜಾ, ಹಮೀದ್ ಮಳಲಿ, ರುಕ್ಮಿಣಿ ಮುತ್ತೂರು, ಸಾದಿಕ್, ಸ್ಥಳೀಯ ಪ್ರಮುಖರಾದ ದಾಮೋದರ್ ಕೊಟ್ಟಾರಿ, ಚಂದ್ರಹಾಸ್ ಮುತ್ತೂರು, ಅನ್ನಿ ಶೆಟ್ಟಿ, ಸಮೀರ್ ಸೂರಲ್ಪಾಡಿ, ಇಸ್ಮಾಯಿಲ್ ಶಾಂತಿನಗರ, ಅಭಿಮಾನಿ ಬಳಗದ ಅಧ್ಯಕ್ಷ ಹಲ್ಯಾರ್ ಇಕ್ಬಾಲ್ ಹಾಗೂ ಸ್ಥಳೀಯ ಹಿರಿಯ ಮುಖಂಡರು ಮತ್ತು ಅಭಿಮಾನಿ ಬಳಗದ ಸದಸ್ಯರು, ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಭಿಮಾನಿ ಬಳಗದ ಗೌರವಾಧ್ಯಕ್ಷರಾದ ಅಕ್ಬರ್ ಬಾಷಾ ಮಾಸ್ಟರ್ ಸ್ವಾಗತಿಸಿದರು, ಕಾರ್ಯದರ್ಶಿ ಹರಿಯಪ್ಪ ಮುತ್ತೂರು ವಂದಿಸಿದರು.


Spread the love

Leave a Reply

Please enter your comment!
Please enter your name here