
ಇನ್ನೆರಡು ದಿನಗಳಲ್ಲಿ ನಾರಾಯಣ ಗುರು ನಿಗಮ ಘೋಷಣೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಇನ್ನೆರಡು ದಿನಗಳಲ್ಲಿ ನಾರಾಯಣ ಗುರು ನಿಗಮ ಘೋಷಣೆ ಮಾಡುವುದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೊಂಡಿದ್ದಾರೆ.
ನಾರಾಯಣ ಗುರು ನಿಗಮ ವಿಚಾರದಲ್ಲಿ ಯಾರಿಗೂ ಯಾವುದೇ ಆತಂಕ ಬೇಡ.
ಮನ್ನಿಸಿ…
ಇನ್ನೆರಡು ದಿನಗಳಲ್ಲಿ ನಿಗಮ ಘೋಷಿಸುತ್ತೇವೆ. ಜವಬ್ದಾರಿ ನನ್ನದು.
-ಕೋಟ— Kota Shrinivas Poojari (@KotasBJP) February 18, 2023
ಈ ಕುರಿತು ಟ್ವೀಟ್ ಮಾಡಿರುವ ಅವರು ನಾರಾಯಣ ಗುರು ನಿಗಮ ರಚನೆಯ ವಿಚಾರದಲ್ಲಿ ಯಾರಿಗೂ ಯಾವುದೇ ಆತಂಕ ಬೇಡ…. ಮನ್ನಿಸಿ.. ಇನ್ನೆರಡು ದಿನಗಳಲ್ಲಿ ನಿಗಮ ಘೋಷಿಸುತ್ತೇವೆ. ಜವಾಬ್ದಾರಿ ನನ್ನದು…. ಎಂದು ಹೇಳಿದ್ದಾರೆ.
ಬಿಲ್ಲವ, ಈಡಿಗ ಸೇರಿದಂತೆ 26 ಉಪಪಂಗಡಗಳ ನಾರಾಯಣಗುರು ನಿಗಮ ರಚನೆ ಕುರಿತ ಬಹುದಿನಗಳ ಬೇಡಿಕೆ ಈ ಬಾರಿಯ ಬಜೆಟ್ನಲ್ಲೂ ಈಡೇರದ ಹಿನ್ನೆಲೆಯಲ್ಲಿ ಬಿಲ್ಲವ ಸಮಾಜ ಆಕ್ರೋಶಿತಗೊಂಡಿದ್ದರು
ಕೆಲವು ದಿನಗಳ ಹಿಂದೆ ಸಚಿವ ಸುನೀಲ್ ಕುಮಾರ್ ಮತ್ತು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಬಿಲ್ಲವ ಸಮಾಜದ ಗಣ್ಯರ ನಿಯೋಗವೊಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದಾಗ ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಶುಕ್ರವಾರ ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಲ್ಲಿ ನಿಗಮ ಘೋಷಣೆ ಮಾಡದಿರುವುದು ಬಿಲ್ಲವ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.