ಇನ್ ಸ್ಟಾಗ್ರಾಂ ಪರಿಚಯದಿಂದ ನಡೆದ ಮದುವೆ! – ಪತಿಯಿಂದ ಹಿಂಸೆಯಾಗುತ್ತಿದೆ ಎಂದು ಪತ್ನಿ ಪೊಲೀಸರಿಗೆ ದೂರು

Spread the love

ಇನ್ ಸ್ಟಾಗ್ರಾಂ ಪರಿಚಯದಿಂದ ನಡೆದ ಮದುವೆ! – ಪತಿಯಿಂದ ಹಿಂಸೆಯಾಗುತ್ತಿದೆ ಎಂದು ಪತ್ನಿ ಪೊಲೀಸರಿಗೆ ದೂರು

ಮಂಗಳೂರು: ಇನ್ ಸ್ಟಾಗ್ರಾಂನಲ್ಲಿ ಯುವಕ ಮತ್ತು ಯುವತಿ ಪರಸ್ಪರ ಪರಿಚಯ ಆಗಿ ಬಳಿಕ ಅದು ಪ್ರೀತಿಗೆ ತಿರುಗಿ ಮದುವೆಯಾದ ಬಳಿಕ ಮದುವೆಯಾದ ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪತಿಯನ್ನು ಹುಡುಕಿಕೊಡುವಂತೆ ಯುವತಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಶಿವಮೊಗ್ಗ ಮೂಲದ ಗಾಡಿಕೊಪ್ಪದ ಯುವತಿ ಮೇಘಶ್ರೀ ಎಂಬಾಕೆ ನೊಂದ ಯುವತಿಯಾಗಿದ್ದು ಮದುವೆಯಾಗಿರುವ ಮಂಗಳೂರಿನ ವಾಮಂಜೂರು ನೀರಾಳ ಬೊಂಡಂತಿಲದ ನಿವಾಸಿ ಲಿಖಿತ್‌ ಎಂಬಾತ ತನ್ನನ್ನು ಮದುವೆಯಾಗಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ಮೇಘಶ್ರೀ ಮತ್ತು ಲಿಖಿತ್ ನಡುವೆ ಇನ್ ಸ್ಟಾಗ್ರಾಂನಲ್ಲಿ ಪರಿಚಯ ಹುಟ್ಟಿಕೊಂಡು ಅದು ಪ್ರೀತಿಗೆ ತಿರುಗಿ ಬಳಿಕ ಮಂಗಳೂರಿನ ಆರ್ಯಸಮಾಜದಲ್ಲಿ ಇಬ್ಬರೂ ಕೂಡ ಮದುವೆಯಾಗಿದ್ದರು. ಮದುವೆಯ ವೇಳೆ ತನ್ನ ಕುಟುಂಬಿಕರು ಲಿಖಿತ್ ಗೆ ಬಂಗಾರ ಹಣ ಎಲ್ಲವನ್ನೂ ನೀಡಿದ್ದರೂ ಕೂಡ ಈಗ ಆತನ ಮನೆಗೆ ಹೋದರೆ ಲಿಖಿತ್ ಸೇರಿದಂತೆ ಆತನ ತಂದೆ ತಾಯಿ ಮನೆಯೊಳಗೆ ಸೇರಿಸುತ್ತಿಲ್ಲ ಎನ್ನುವುದು ಆಕೆಯ ಆರೋಪವಾಗಿದೆ.

2022 ಜುಲೈ 2 ರಂದು ಯುವತಿ ಮೇಘಶ್ರೀಯನ್ನು ಲಿಖಿತ್ ಮದುವೆಯಾಗಿದ್ದು ಉರ್ವ ಮಠದಕಿಣಿ ಬಳಿಯ ಬಾಡಿಗೆ ಮನೆಯೊಂದರಲ್ಲಿ ಇದ್ದು ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಬಳಿಕ ತನಗೆ ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಲ್ಲದೆ ಕೊಲ್ಲುವ ಬೆದರಿಕೆ ಕೂಡ ಹಾಕಿದ್ದಾನೆ. ತನ್ನ ಗಂಡನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಆಕೆ ದೂರು ನೀಡಿದ್ದಾಳೆ.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘಶ್ರೀ ತಾಯಿ ಜಯಲಕ್ಷ್ಮೀ ತನ್ನ ಮಗಳ ಸಂಸಾರ ಸುಖವಾಗಿರಲಿ ಎಂಬ ಆಸೆಯಿಂದ ಮನೆ ವ್ಯವಸ್ಥೆ ಕೂಡ ಮಾಡಿ ಕೊಟ್ಟಿದ್ದರೂ ಕೂಡ ಆತ ಆಕೆಗೆ ಚಿತ್ರ ಹಿಂಸೆ ನೀಡಿದ್ದಾನೆ. ಆಕೆಗೆ ಆತ ನೀಡುವ ಹಿಂಸೆಯನ್ನು ನೋಡಿ ಈಗ ಪೊಲೀಸರಿಗೆ ದೂರು ನೀಡಿದ್ದು ತನ್ನ ಮಗಳಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ಮೇಘಶ್ರೀ ದೂರನ್ನು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love

Leave a Reply

Please enter your comment!
Please enter your name here