ಇಸ್ಫೀಟ್ ಅಡ್ಡೆಗೆ ದಾಳಿ : ನಗದು, ಕಾರು ಸಹಿತ ರೂ. 9.77 ಲಕ್ಷ ಸೊತ್ತು ವಶ – 24 ಮಂದಿ ಬಂಧನ

Spread the love

ಇಸ್ಫೀಟ್ ಅಡ್ಡೆಗೆ ದಾಳಿ : ನಗದು, ಕಾರು ಸಹಿತ ರೂ. 9.77 ಲಕ್ಷ ಸೊತ್ತು ವಶ – 24 ಮಂದಿ ಬಂಧನ

ಉಡುಪಿ: ಇಸ್ಫೀಟ್ ಅಡ್ಡೆಗೆ ಕೋಟ ಪೊಲೀಸರು ದಾಳಿ ನಡೆಸಿ 24 ಮಂದಿಯನ್ನು ಬಂಧಿಸಿ ನಗದು, ಕಾರು ಸಹಿತ ರೂ. ರೂ 9,77,260 /- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ.

ಬಂಧಿತರನ್ನು ಅಬ್ದುಲ್ ಮುನೀರ್,2) ಸಲ್ಮಾನ್,3) ಬಸವರಾಜ,4) ವಿಷ್ಣು ಕೆ.ವಿ.,5) ದಿನೇಶ್,6) ಕೆ. ವಿನಾಯಕ7) ಸಂದೀಪ,8) ಕೃಷ್ಣ,9) ಸುಧಾಕರ,10) ನಾಗರಾಜ,11) ಸುಬ್ರಹ್ಮಣ್ಯ, 12) ಶ್ರೀಧರ13) ಇ. ಅ್ಯಂಟನಿ ಮಸ್ಕರೇನಸ್,14)ಶೃತಿರಾಜ್, 15) ರಘು,16) ಹುಸೇನ್,17) ಸಂದೇಶ್,18) ರಾಜು ಮೋಗೇರ,19) ಗೋಪಾಲ, 20) ಗಣೇಶ್,21) ಮಿಥುನ್ ,22) ಸುಧರ್ಮ,23) ಕಮಲಾಕ್ಷ ಹಾಗೂ24) ಸುಧಾಕರ ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಗುಡ್ಡೆಯಂಗಡಿ ಕ್ರಾಸ್ ಬಳಿ ಇರುವ ವಿನಾಯಕ ಸಭಾಂಗಣದಲ್ಲಿ ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಕೋಟ ಪಿಎಸ್ ಐ ಶಂಭುಲಿಂಗಯ್ಯ ಮತ್ತವರ ತಂಡ ದಾಳೀ ನಡೆಸಿ 24 ಮಂದಿಯನ್ನು ವಶಕ್ಕೆ ಪಡೆದು ಅವರಿಂದ ರೂ 1,49,680 ನಗದು, ಒಂದು ಓಮಿನಿ ಕಾರು, ಒಂದು ರಿಡ್ಜ್ ಕಾರು ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 9,77,260 ಆಗಿರುತ್ತದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 153/2023 ಕಲಂ: 79, 80 K.P. Act ರಂತೆ ಪ್ರಕರಣ ದಾಖಲಾಗಿದೆ.


Spread the love