ಇ-ರಿಕ್ಷಾಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ

Spread the love

ಇ-ರಿಕ್ಷಾಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ

ಮಂಗಳೂರು: ಸಾರಿಗೆ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡದ ಇ-ರಿಕ್ಷಾಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ನಗರದ ರಿಕ್ಷಾ ಚಾಲಕರು ಬುಧವಾರ ಪ್ರತಿಭಟನೆ ನಡೆಸಿದರು.

ಇ-ರಿಕ್ಷಾಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ರಿಕ್ಷಾಚಾಲಕರು ಇ-ರಿಕ್ಷಾಗಳು ಸಾರಿಗೆ ಪ್ರಾಧಿಕಾರದ ನಿಯಂತ್ರಣದಲ್ಲಿ ಬಾಡಿಗೆ ಮಾಡಬೇಕು ಮತ್ತು ಮೋಟಾರು ವಾಹನ ಕಾಯಿದೆ ನಿಯಂತ್ರಣದಿಂದ ಅವುಗಳನ್ನು ಹೊರಗಿಟ್ಟ ಸರಕಾರದ ನೀತಿಗೆ ದಿಕ್ಕಾರ ಕೂಗಿದರು.

ರಿಕ್ಷಾ ದರ ಪರಿಷ್ಕರಣೆಯಲ್ಲಿ ವಿಳಂಬ, ಸಾರಿಗೆ ಪ್ರಾಧಿಕಾರದ ಸಭೆ ನಡೆದು 6 ತಿಂಗಳು ಕಳೆದರೂ ಕೂಡ ದರ ಪರಿಷ್ಕರಿಸದ ಪ್ರಾಧಿಕಾರದ ವರ್ತನೆ ಖಂಡನೀಯ. ನಗರದಲ್ಲಿ 210 ರಿಕ್ಷಾ ಪಾರ್ಕುಗಳು ಇನ್ನು ಕೂಡ ನೋಂದಾಣಿಯಾಗದೆ ಇದ್ದು, ಮಹಾನಗರಪಾಲಿಕೆ ವಿಳಂಬ ನೀತಿಯನ್ನು ತೋರಿಸುತ್ತಿದೆ. ಕೂಡಲೇ ರಿಕ್ಷಾ ಪಾರ್ಕುಗಳು ನೋಂದಣಿಯಾಗಬೇಕು ಎಂದು ಆಗ್ರಹಿಸಿದರು.


Spread the love

1 Comment

  1. E rikshaw are good for the nature and making good job to make carbon nutral. E rickshaws also contribute to our economy to reduce the burdon in fuel import. There is equally important lives of the auto drivers.

Leave a Reply

Please enter your comment!
Please enter your name here