ಈಡಿಗ-ಬಿಲ್ಲವ ಸಮುದಾಯಕ್ಕಾಗಿ ನಿಗಮ ಹುಸಿಯಾದ ನಿರೀಕ್ಷೆ – ಸತೀಶ್ ವಿ ಗುತ್ತೇದಾರ ತೀವ್ರ ಬೇಸರ

Spread the love

 ಈಡಿಗ-ಬಿಲ್ಲವ ಸಮುದಾಯಕ್ಕಾಗಿ ನಿಗಮ ಹುಸಿಯಾದ ನಿರೀಕ್ಷೆ – ಸತೀಶ್ ವಿ ಗುತ್ತೇದಾರ ತೀವ್ರ ಬೇಸರ

ಕಲಬುರಗಿ : ರಾಜ್ಯದ 2022-23 ನೇ ಸಾಲಿನ ಮುಂಗಡ ಪತ್ರದಲ್ಲಿ ರಾಜ್ಯದ ಇತರ ಅನೇಕ ಸಮುದಾಯಗಳಿಗೆ ನಿಗಮದ ಮೂಲಕ ಆರ್ಥಿಕ ಬೆಂಬಲ ಘೋಷಿಸಿ ಉತ್ತೇಜನ ನೀಡಿದರೂ ಕರ್ನಾಟಕದಲ್ಲಿ ಪ್ರಬಲವಾಗಿರುವ ಈಡಿಗ-ಬಿಲ್ಲವ ಸಮುದಾಯಕ್ಕಾಗಿ ನಿಗಮ ಘೋಷಣೆ ಮಾಡುವ ನಿರೀಕ್ಷೆ ಹುಸಿಯಾಗಿ ತೀವ್ರ ನಿರಾಸೆ ಉಂಟಾಗಿದೆ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ನಿರ್ದೇಶಕರಾದ ಸತೀಶ್ ವಿ ಗುತ್ತೇದಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮಾ. 4 ರಂದು ವಿಧಾನಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಬಜೆಟ್‍ನಲ್ಲಿ 60 ಲಕ್ಷಕ್ಕೂ ಅಧಿಕ ಇರುವ ಈಡಿಗ ಸಮುದಾಯದ ಬಹುದಿನಗಳ ಬೇಡಿಕೆಯಾದ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪನೆ ಮತ್ತು ಗುಲಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಪ್ರಾರಂಭದ ಕನಸು ಕೂಡಾ ಈಡೇರಲಿಲ್ಲ. ಈಗಾಗಲೇ ನಮ್ಮ ಸಮುದಾಯದ ಇಬ್ಬರು ಸಚಿವರಿದ್ದು ಈ ಬೇಡಿಕೆ ಈಡೇರದೆ ಇರುವುದು ಖೇದಕರ ವಿಷಯ. ಉಡುಪಿ, ಉ.ಕ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಾಲ್ಕು ವಸತಿ ಶಾಲೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿ ಮೂಗಿಗೆ ತುಪ್ಪ ಸವರಲಾಗಿದೆ. ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಪ್ರದೇಶದ ಈಡಿಗ ಸಮುದಾಯಕ್ಕೆ ಕಿಂಚಿತ್ತೂ ಸ್ಪಂದನೆ ನೀಡದೆ ಮಂಕುಬೂದಿ ಎರಚಲಾಗಿದೆ.

ಹಿಂದುಳಿದ ವರ್ಗದ ಜನಾಂಗದವರಿಗೆ ಹೆಚ್ಚಿನ ಚೈತನ್ಯ ನೀಡುವುದಾಗಿ ಹೇಳಿದ ಮುಖ್ಯ ಮಂತ್ರಿಗಳು ಶೋಷಿತ ಜನ ಸಮುದಾಯ ಮತ್ತು ಪಾರಂಪರಿಕ ವೃತ್ತಿ ವಂಚಿತರಾಗಿ ಬೀದಿಗೆ ಬಿದ್ದ ಈಡಿಗ-ಬಿಲ್ಲವ ಸೇರಿದಂತೆ ಸುಮಾರು 25 ಪಂಗಡಗಳ ಕಲ್ಯಾಣಕ್ಕಾಗಿ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪ ಮಾಡದೆ ಕಡೆಗಣ ಸಿರುವುದು ಶೋಚನೀಯ ಸಂಗತಿ. ಇತರ ನಿಗಮಗಳಿಗೆ ಹಣಕಾಸಿನ ನೆರವು ನೀಡಿದರೂ ಈಗಾಗಲೇ ಇಬ್ಬರು ಸಚಿವರು, ಸಮುದಾಯದ ಶಾಸಕರು ಹಾಗೂ ಸಮುದಾಯದ ಮುಖಂಡರಾದ ಮಾಲಿಕಯ್ಯ ವಿ. ಗುತ್ತೇದಾರ್ ನೇತೃತ್ವದಲ್ಲಿ ಹಲವು ವರ್ಷಗಳಿಂದ 500 ಕೋಟಿ ರೂ ಅನುದಾನದೊಂದಿಗೆ ನಿಗಮ ಆರಂಭಿಸಿ ನೆರವು ನೀಡುವಂತೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸುವಂತೆ ಮನವಿ ಸಲ್ಲಿಸಿದಾಗ ಮುಖ್ಯ ಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡಿದರೂ ಬಜೆಟ್‍ನಲ್ಲಿ ಮೌನವಹಿಸಿರುವುದು ಸಮಾಜ ಬಾಂಧವರನ್ನು ಕಡೆಗಣ ಸಿದಂತಾಗಿದೆ ಎಂದು ಗುತ್ತೇದಾರ್ ತೀವ್ರ ದುಃಖ ವ್ಯಕ್ತ ಪಡಿಸಿದ್ದಾರೆ.

ಮುಂಬರುವ ವಿಧಾನ ಸಭೆ ಚುನಾವಣೆ ದೃಷ್ಟಿಯಲ್ಲಿ ಪಕ್ಷದ ನೆಲೆ ಭದ್ರಗೊಳಿಸಲು ಬಜೆಟ್ ನಲ್ಲಿ ಹಲವಾರು ಪ್ರಸ್ತಾಪ ಇದ್ದರೂ ಈಡಿಗ-ಬಿಲ್ಲವ ಜನಾಂಗದ ಬೇಡಿಕೆ ತಿರಸ್ಕøತಗೊಳಿಸಿರುವುದರ ಮರ್ಮ ತಿಳಿಯದಾಗಿದೆ. 80 ಲಕ್ಷ ಜನರ ಬೇಡಿಕೆ ಕಡೆಗಣ ಸಿರುವು ದಕ್ಕೆ ಸಚಿವರಾದ ಸುನೀಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿಯವರು ತಕ್ಷಣ ಮುಖ್ಯಮಂತ್ರಿಗಳ ಗಮನ ಸೆಳೆದು ಜನಾಂಗಕ್ಕೆ ಸಿಹಿ ಸುದ್ದಿ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನಾಂಗದ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಬಜೆಟ್ ನಲ್ಲಿ ಸಮುದಾಯಕ್ಕಾದ ಅನ್ಯಾಯದ ಬಗ್ಗೆ ಶೀಘ್ರದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಹಾಗೂ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಜೊತೆ ಚರ್ಚಿಸಿ ದಿಟ್ಟ ನಿರ್ಧಾರ ಕೈಗೊಳ್ಳಲಾಗುವುದು. ಬೇಡಿಕೆಯನ್ನು ತಕ್ಷಣ ಪರಿಗಣ ಸಿ ನ್ಯಾಯ ಒದಗಿಸಿದರೆ ಒಳ್ಳೆಯದು ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಾಠ ಕಲಿಸಲು ಮುಂದಾಗುವುದಾಗಿ ಹೇಳಿದರು.

ಸಮುದಾಯವನ್ನು ಪ್ರತಿನಿಧಿಸುವ ಅನೇಕ ಶಾಸಕರಿದ್ದು ಹಾಗೂ ಅವಿಭಜಿತ ದ.ಕ ಜಿಲ್ಲೆಯಲ್ಲಿ ಅತ್ಯಧಿಕವಾಗಿ ಸಮುದಾಯದ ಜನರಿದ್ದರೂ ಈ ಬಗ್ಗೆ ಶಾಸಕರು ಮೌನವಹಿಸಿರುವುದು ಮತ್ತು ಮುಖ್ಯಮಂತ್ರಿಗಳು ಈ ಬೇಡಿಕೆಗಳನ್ನು ಕಿವಿಗೆ ಹಾಕಿಕೊಳ್ಳದಿರುವುದು ಸಮಾಜಕ್ಕೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.


Spread the love