
ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ವಿಚಾರಣೆಗೆ ಕರೆದರೆ ಹೋಗಿ ಹೇಳಿಕೆ ಕೊಡಬೇಕು -ಸಚಿವ ಅರಗ ಜ್ಞಾನೇಂದ್ರ
ಉಡುಪಿ: ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ಕೋರ್ಟ್ ವಿಚಾರಣೆಗೆ ಕರೆದರೆ ಹೋಗಿ ಹೇಳಿಕೆ ಕೊಡಬೇಕು. ಕಾನೂನು ಕಾಂಗ್ರೆಸ್ ಲೀಡರ್ಸ್ ಒಂದು; ಜನಸಾಮಾನ್ಯರಿಗೆ ಒಂದು ಅಂತ ಇದೆಯಾ? ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶ್ನಿಸಿದರು.
ಅವರು ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಒಂದು ವೇಳೆ ರಾಹುಲ್ ಗಾಂಧಿ ನಿರಪರಾಧಿಯಾದ ರೆ ಹೊರಬರುತ್ತಾರೆ, ಅಪರಾಧಿಗಳಾದರೆ ಶಿಕ್ಷೆ ಅನುಭವಿಸುತ್ತಾರೆ. ಇವರಿಗೆ ಈ ನೆಲದ ಕಾನೂನು ಅನ್ವಯಿಸುವುದಿಲ್ಲವೇ? ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಡ್ಡಮಾರ್ಗ ಹಿಡಿದ ಕಾಂಗ್ರೆಸ್ ನಾಪತ್ತೆಯಾಗುತ್ತಿದೆ ಎಂದರು.
ಹಿಂದೂ ಮುಖಂಡ ಹಾಗೂ ಬಿಜೆಪಿ ನಾಯಕರಾದ ಯಶ್ಪಾಲ್ ಸುವರ್ಣ ಗೆ ಬೆದರಿಕೆ ಹಾಕಿರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಪೊಲೀಸರು ಈ ಕುರಿತು ನಿಗಾ ಇರಿಸಿದ್ದಾರೆ ಎಂದರು.
ಪಿಎಫ್ ಐ ಇಂತಹ ಮತಾಂಧ ಶಕ್ತಿಗಳು ನಮ್ಮ ನಡುವೆ ಇದ್ದಾವೆ ಹಿಜಾಬ್ ನಿಂದ ಆರಂಭಿಸಿ ಏನೆಲ್ಲಾ ಮಾಡಿದ್ದಾರೆ ಎಲ್ಲರಿಗೂ ಗೊತ್ತು. ಇಂತಹ ಶಕ್ತಿಗಳನ್ನು ಮಟ್ಟ ಹಾಕಲು ಏನು ಮಾಡಬೇಕು ಎಂಬುವುದಾಗಿ ಚಿಂತನೆ ನಡೆಯುತ್ತಿದೆ. ಸೂಕ್ತ ಸಮಯ ಬಂದಾಗ ಮಾಡುತ್ತೇವೆ ಕೇಂದ್ರಕ್ಕೆ ಚಟುವಟಿಕೆಗಳ ಬಗ್ಗೆ ಆಗ್ಗಾಗ್ಗೆ ವರದಿ ಕಳಿಸುತ್ತಾ ಇದ್ದೆವೆ ಎಂದರು.
ರಾಜ್ಯದಲ್ಲಿ ಯುಪಿ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗ ಮಾಡುವಂತಹ ಸನ್ನಿವೇಶ ಇನ್ನೂ ಸೃಷ್ಟಿಯಾಗಿಲ್ಲ. ಇಲ್ಲಿ ಕಾನೂನನ್ನು ಪಾಲಿಸುವ ಮನಸ್ಥಿತಿ ಇನ್ನೂ ಉಳಿದುಕೊಂಡಿದೆ ಎಂದರು. ಇನ್ನೂ ಮಂಡಿಸಲು ಹಲವು ವಿಧೇಯಕಗಳಿವೆ ,ಮತಾಂತರ ನಿಷೇಧ ಕಾನೂನು ವಿಧಾನಪರಿಷತ್ ನಲ್ಲಿ ಒಪ್ಪಿಗೆ ಪಡೆಯಲು ಬಾಕಿ ಉಳಿದಿದೆ ಎಂದರು.