ಉಕ್ರೇನ್‌ ನಿಂದ ಮಂಗಳೂರು ತಲುಪಿದ ವೈದ್ಯ ವಿದ್ಯಾರ್ಥಿನಿ ಅನುಷಾ ಭಟ್

n
Spread the love

ಉಕ್ರೇನ್‌ ನಿಂದ ಮಂಗಳೂರು ತಲುಪಿದ ವೈದ್ಯ ವಿದ್ಯಾರ್ಥಿನಿ ಅನುಷಾ ಭಟ್

ಮಂಗಳೂರು: ಉಕ್ರೇನ್‌ನ ವಿನ್ನಸ್ಟಿಯಾ ನಗರದ ನ್ಯಾಶನಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು, ಮಂಗಳೂರು ಬಿಜೈ ನಿವಾಸಿ ಅನುಷಾ ಭಟ್ ಇಂದು ಮಂಗಳೂರಿಗೆ ಆಗಮಿಸಿದರು.

n

‌ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬಂದಿಳಿದ ಅನುಷಾ ಭಟ್‌ರನ್ನು ಅರ ಹೆತ್ತವರು ಹಾಗೂ ಕುಟುಂಬಸ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಜತೆಗೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಸ್ವಾಗತಿಸಿದರು.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅನುಷಾ ಉಕ್ರೇನ್‌ನಲ್ಲಿ ನಾವಿದ್ದ ಸ್ಥಳದಿಂದ ಗಡಿ ದಾಟಲು ಏಜೆಂಟ್‌ಗಳ ಮೂಲಕ ಪಾಸ್‌ಗಳನ್ನು ಪಡೆದುಕೊಂಡಿದ್ದವು. ಆದರೆ ಯಾವ ಗಡಿಯನ್ನು ನಾವು ತಲುಪಲಿದ್ದೇವೆ ಎಂಬ ಅರಿವು ನಮಗಿರಲಿಲ್ಲ. ಪಾಸ್ ಪಡೆದು ನಾವು ಅಲ್ಲಿಂದ ರೊಮೇನಿಯಾದ ಗಡಿ ತಲುಪಿದೆವು. ಅಲ್ಲಿ ನಾವು ಕೆಲಹೊತ್ತು ಕಾಲ್ನಡಿಗೆಯಲ್ಲೇ ಸಾಗಬೇಕಾಯಿತು. ಅಲ್ಲಿ ಸರಕಾರಿ ಅಧಿಕಾರಿಗಳಾರೂ ಇರಲಿಲ್ಲ. ಅಲ್ಲಿಂದ ರೊಮೇನಿಯಾದ ಗಡಿಯಲ್ಲಿ ವಲಸೆ ಕಚೇರಿ ತಲುಪಿದ್ದು ಅಲ್ಲಿಂದ ನಮ್ಮನ್ನು ಆಶ್ರಯ ತಾಣವೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ನಮ್ಮನ್ನು ವಿಮಾನದ ಮೂಲಕ ಮುಂಬೈಗೆ ಕರೆತರಲಾಯಿತು. ಮುಂಬೈನಿಂದ ವಿಮಾನದ ಮೂಲಕ ಮಂಗಳೂರು ತಲುಪಿದ್ದೇನೆ ಎಂದರು.


Spread the love