ಉಗ್ರರ ಪರ ಗೋಡೆ ಬರಹ:  ಬಂಧಿತರ ತನಿಖೆ ಎನ್.ಐ.ಎ ಗೆ ನೀಡಲು ಶರಣ್ ಪಂಪ್ ವೆಲ್ ಆಗ್ರಹ

Spread the love

ಉಗ್ರರ ಪರ ಗೋಡೆ ಬರಹ:  ಬಂಧಿತರ ತನಿಖೆ ಎನ್.ಐ.ಎ ಗೆ ನೀಡಲು ಶರಣ್ ಪಂಪ್ ವೆಲ್ ಆಗ್ರಹ

ಮಂಗಳೂರು: ಉಗ್ರರ ಪರ ಗೋಡೆಬರಹ ಪ್ರಕರಣ ತನಿಖೆ ಭೇದಿಸಿದ ಪೊಲೀಸ್ ಇಲಾಖೆಯ ಕೆಲಸ ಶ್ಲಾಘನೀಯವಾಗಿದ್ದು, ಬಂಧಿತರ ತನಿಖೆ ನಡೆಸಲು ಎನ್.ಐ.ಎ ಗೆ ಶಿಫಾರಸು ಮಾಡಲು ಪೊಲೀಸ್ ಕಮಿಷನರಿಗೆ ವಿಶ್ವ ಹಿಂದೂ ಪರಿಷದ್ ಆಗ್ರಹಿಸಿದೆ.

ಮಂಗಳೂರಿನ ಉಗ್ರರ ಪರ ಗೋಡೆಬರಹ ಪ್ರಕರಣಕ್ಕೆ ಸಂಭಂದಿಸಿದಂತೆ ತೀರ್ಥಹಳ್ಳಿಯ ಮಾಜ್ಸ್ ಮುನೀರ್ ಅಹಮದ್ ಮತ್ತು ಮಹಮದ್ ಶರೀಕ್ ಸಹಿತ ಮೂರುಜನ ಶಂಕಿತ ಉಗ್ರರನ್ನು ಬಂಧಿಸಿದ ಕೆಲಸ ಶ್ಲಾಘನೀಯ, ಪೊಲೀಸ್ ಇಲಾಖೆಗೆ ವಿಶ್ವ ಹಿಂದೂ ಪರಿಷದ್ ಅಭಿನಂದನೆ ಸಲ್ಲಿಸುತ್ತದೆ.

ಈ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಿಂದ ಐಸಿಸ್ ಉಗ್ರಗಾಮಿ ಸಂಘಟನೆಗಳ ಕುಖ್ಯಾತ ಕೆಲವು ವ್ಯಕ್ತಿಗಳ ವಿಡಿಯೋ ಮತ್ತು ಜಾಗತಿಕ ಭಯೋತ್ಫಾದಕ ಜಮೈಕಾ ಮೂಲದ ಶೇಕ್ ಅಬ್ದುಲ್ಲಾ ಫೈಝಲ್ ಪ್ರಚೋದನಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಸಿಕ್ಕಿರುವುದು ಬಹಳ ಆತಂಕಕಾರಿ ವಿಷಯ. ಇವರ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದ್ದು ಇನ್ನಷ್ಟು ವ್ಯಕ್ತಿಗಳು ಇದರ ಹಿಂದೆ ಕೆಲಸಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದ್ದು,

ಎನ್.ಐ.ಎ ಗೆ ತನಿಖೆಗೆ ಒಳಪಡಿಸಿದರೆ ಇದರ ಹಿಂದಿರುವ ವ್ಯವಸ್ಥಿತ ಜಾಲವನ್ನು ಮತ್ತು ವ್ಯಕ್ತಿಗಳನ್ನು ಭೇದಿಸಲು ಸಾಧ್ಯವಾಗುತ್ತದೆ. ಆದುದರಿಂದ ಈ ಪ್ರಕರಣವನ್ನು ಎನ್.ಐ.ಎ ಗೆ ತನಿಖೆಗೆ ನೀಡಲು ಮಂಗಳೂರು ಪೊಲೀಸ್ ಕಮಿಷನರ್ ಶಿಫಾರಸು ಮಾಡಬೇಕೆಂದು ಈ ಮೂಲಕ ಆಗ್ರಹ ಮಾಡುತ್ತಿದ್ದೇನೆ ಎಂದು ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love