
ಉಚಿತ ಲಸಿಕೆ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲ-ಯು.ಟಿ.ಖಾದರ್
ಮಂಗಳೂರು:ಎಲ್ಲರಿಗೂ ಉಚಿತ ಲಸಿಕೆ ನೀಡುತ್ತೇವೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರ ಅದನ್ನು ಅನುಷ್ಠಾನ ಮಾಡುವಲ್ಲಿ ಸಂಪೂ ರ್ಣ ವಿಫಲವಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಸುದ್ದಿಗೋ ಷ್ಠಿಯಲ್ಲಿಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಪ್ರತಿ ದಿನ ಸುಮಾರು ಒಂದೂವರೆ ಲಕ್ಷ ಡೋಸ್ ಲಸಿಕೆ ಅಗತ್ಯ ಇದೆ.ಆದರೆ ಸರಬರಾಜಾಗುತ್ತಿರುವುದು ಒಂದು ವಾರಕ್ಕೆ 50 ಸಾವಿರ.ಇದರಿಂದಾಗಿ ಜನಸಾಮಾನ್ಯರು ಲಸಿಕೆ ಗಾಗಿ ಪರದಾಡುವಂತಾಗಿದೆ.ಸರಕಾರ ಜನಸಾಮಾನ್ಯರ ಈ ರೀತಿಯ ಅಗತ್ಯಗಳ ಬಗ್ಗೆ ,ಸಮಸ್ಯೆ ಚಿಂತನೆ ನಡೆಸುತ್ತಿಲ್ಲ ಎಂದು ಯು.ಟಿ.ಖಾದರ್ ಆರೋಪಿಸಿದ್ದಾರೆ.
ಅನಿವಾಸಿ ಭಾರತೀಯರಿಗೆ ಕೋವಿಶೀಲ್ಡ್ ನೀಡಿದರೂ ಕೆಲವು ದೇಶಗಳು ಮಾನ್ಯತೆ ಮಾಡುತ್ತಿಲ್ಲ.ಅದಕ್ಕಾಗಿ ಕೇರಳ ರಾಜ್ಯದಲ್ಲಿ ತಾಂತ್ರಿಕ ಸಮಸ್ಯೆ ನಿವಾರಿಸಿ ಲಸಿಕೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಈ ಬಗ್ಗೆ ಇನ್ನೂ ಯಾವುದೇ ಕ್ರಮ ಆಗಿಲ್ಲ.ವಿದೇಶಕ್ಕೆ ಹೋಗುವ ವ್ಯಕ್ತಿ ಕುಟುಂಬ ಸಹಿತ ಹೋಗುವುದಕ್ಕೆ ಸಮಸ್ಯೆ ಯಾಗುತ್ತಿದೆ.ವಿದೇಶಕ್ಕೆ ತೆರಳುವ ವ್ಯಕ್ತಿ ಯ ಜೊತೆ ಆತನ ಕುಟುಂಬದ ವ್ಯಕ್ತಿ ಗಳಿಗೂ ಲಸಿಕೆ ಹಾಕಲು ಕ್ರಮ ಕೈ ಗೊಂಡಿಲ್ಲ.ಇದರಿಂದ ಆತ ತನ್ನ ಕುಟುಂಬ ವನ್ನು ಇಲ್ಲಿಯೇ ಬಿಟ್ಟು ತೆರಳಬೇಕಾದ ಸಮಸ್ಯೆ ಉಂಟಾಗಿದೆ.ಈ ಬಗ್ಗೆ ತಕ್ಷಣ ಸರಕಾರ ಗಮನ ಹರಿಸಿ ಕ್ರಮ ಕೈಗೊಳ್ಳ ಬೇಕು. ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯಧ್ಯಕ್ಷರ ಆಡಿಯೋ ನಕಲಿ ಅಥವಾ ಅಸಲಿಯೇ ಎಂದು ಮುಖ್ಯ ಮಂತ್ರಿ ಸ್ಪಷ್ಟ ಪಡಿಸಲಿ.ಹಾಲಿ ಸಿ.ಎಂ ಯೆಇಯೂರಪ್ಪ ಇನ್ನೂ ಮುಂದುವರಿಯು ತ್ತಾರೋ ಇಲ್ಲವೋ ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ರು ಸ್ಪಷ್ಟವಾಗಿ ತಿಳಿಸಲಿ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕಡಲ್ಕೋರತ ತಡೆಗಟ್ಟಲು ಜಿಲ್ಲಾಡಳಿತ ಯಾವುದೇ ರೀತಿಯಲ್ಲೂ ಕಾಳಜಿ ವಹಿಸಿದಂತೆ ತೋರುತ್ತಿಲ್ಲ. ಉಳ್ಳಾಲ, ಸೋಮೇಶ್ವರ್ ಬೀಚ್ ನಲ್ಲಿ ರಸ್ತೆಗಳು ಸಮುದ್ರ ಪಾಲಾಗುತ್ತಿದೆ .ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋಟ್ಯಾಂತರ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಎಲ್ಲವೂ ಸಮುದ್ರ ಪಾಲಾಗುತ್ತಿದೆ.ಶಾಶ್ವತ ಪರಿಹಾರದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯು.ಟಿ.ಖಾದರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಸಿ.ಎಂ ಹುದ್ದೆಗೆ ಜಗಳ ನಡೆಯುತ್ತಿಲ್ಲ.ರಾಜ್ಯದಲ್ಲಿ ಬಿಜೆಪಿ ವಿಫಲವಾಗಿದೆ ಸಹಜವಾಗಿ ಜನರು ಕಾಂಗ್ರೆಸ್ ಸಿ.ಎಂ ಬಗ್ಗೆ ಮಾತನಾಡುತ್ತಿದ್ದಾರೆ.ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳ ರಾಜಕೀಯ ಇಲ್ಲ ಎಂದು ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಾ.ಪಂ.ಅಧ್ಯಕ್ಷ ಮುಹಮ್ಮದ್ ಮೋನು,ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಶೆಟ್ಟಿ, ಹುಸೇನ್ ಕಲ್ಲಾಪು,ಜಬ್ಬಾರ್ ಮೊದಲಾದ ವರು ಉಪಸ್ಥಿತರಿದ್ದರು.