ಉಚ್ಚಾಟನೆಯಾಗದ ಅಧಿಕಾರಿ – ದಕ ಜಿಲ್ಲಾ ಯುವ ಜೆಡಿಎಸ್ ನಿಂದ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ, ಬಂಧನ

Spread the love

ಉಚ್ಚಾಟನೆಯಾಗದ ಅಧಿಕಾರಿ – ದಕ ಜಿಲ್ಲಾ ಯುವ ಜೆಡಿಎಸ್ ನಿಂದ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ, ಬಂಧನ

ಮಂಗಳೂರು: ಆರಾಧ್ಯರಾದ ಕೋಟಿ ಚೆನ್ನಯರ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯವರನ್ನು ತಮ್ಮ ಪಕ್ಷದಿಂದ ಇನ್ನೂ ಕೂಡ ಉಚ್ಚಾಟನೆ ಮಾಡದಿರುವ ಕಾರಣ ಯುವ ಜೆಡಿಎಸ್ ವತಿಯಿಂದ ದಕ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಕಾರ್ಯಕರ್ತರನ್ನು ಅರ್ಧದಲ್ಲಿಯೇ ತಡೆದು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಬಿಲ್ಲವರ ಆರಾಧ್ಯರಾದ ಕೋಟಿ ಚೆನ್ನಯರ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯವರನ್ನು ತಮ್ಮ ಪಕ್ಷದಿಂದ ಇನ್ನೂ ಕೂಡ ಉಚ್ಛಾಟನೆ ಮಾಡುವಂತೆ ಅಕ್ಷಿತ್ ಸುವರ್ಣ ಆಗ್ರಹಿಸಿದ್ದರು. ಒಂದು ವೇಳೆ ಉಚ್ಚಾಟನೆ ಮಾಡದೇ ಹೋದಲ್ಲಿ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದರು.

ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಶಾರಾದಾ ವಿದ್ಯಾಲಯದಿಂದ ಜಿಲ್ಲಾ ಬಿಜೆಪಿ ಕಚೇರಿಗೆ ಮೆರವಣಿಗೆ ಮೂಲಕ ಮುತ್ತಿಗೆ ಹಾಕಲು ತೆರಳಿದ್ದು, ದಾರಿ ಮಧ್ಯದಲ್ಲಿಯೇ ಪೊಲೀಸರು ತಡೆದು ಕಾರ್ಯಕರ್ತರನ್ನು ಬಂಧಿಸಿದರು.

ಈ ವೇಳೆ ಯುವ ಜೆಡಿಎಸ್ ಕಾರ್ಯಕರ್ತರಾದ ರತೀಶ್ ಕರ್ಕೇರ ,ಹಿತೇಶ್ ರೈ ,ಪಂಚಾಯತ್ ಅಧ್ಯಕ್ಷ ಡಿ ಬಿ ಹಮ್ಮಬ್ಬ ,ಪುಷ್ಪರಾಜ್ ,ಸತ್ತಾರ್ ಬಂದರ್ , ಲಿಖಿತ್ ರಾಜ್ ,ಪ್ರದೀಪ್ ಹಾಗೂ ಇತರರು ಉಪಸ್ಥಿತರಿದ್ದರು.

 


Spread the love