ಉಚ್ಚಿಲ ದಸರಾ -2022 ಆಮಂತ್ರಣ ಪತ್ರಿಕೆ ಬಿಡುಗಡೆ

Spread the love

ಉಚ್ಚಿಲ ದಸರಾ -2022 ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ಬಾರಿಯ ಸೆ. 26ರಿಂದ ಅಕ್ಟೋಬರ್ 5 ರ ವರೆಗೆ ನಡೆಯುವ ನವರಾತ್ರಿ ಉತ್ಸವವನ್ನು ವೈಭವೋಪೇತವಾಗಿ ಉಚ್ಚಿಲ ದಸರಾ -2022 ಎಂಬುದಾಗಿ ಆಚರಿಸಲು ಸಂಕಲ್ಪ ಮಾಡಲಾಗಿದ್ದು ಇದರ ಆಮಂತ್ರಣ ಪತ್ರವನ್ನು ಸಮಾಜದ ನೇತಾರರಾದ ನಾಡೋಜ ಡಾ. ಜಿ ಶಂಕರ್ ಅವರು ಬಿಡುಗಡೆಗೊಳಿಸಿ ಮುತ್ತೈದೆಯರಿಗೆ ಆಮಂತ್ರಣ ಪತ್ರವನ್ನು ಹಸ್ತಾಂತರ ಮಾಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯಸಿ ಕೋಟ್ಯಾನ್, ವಾಸುದೇವ ಸಾಲ್ಯಾನ್, ಗುಂಡು ಬಿ ಅಮೀನ್, ಸುಧಾಕರ್ ಕುಂದರ್, ಮೋಹನ್ ಬಂಗೇರಾ, ಸುಕುಮಾರ್ ಶ್ರೀಯಾನ್, ಅಪ್ಪಿ ಎಸ್ ಸಾಲ್ಯಾನ್, ಯಶೋಧ ಕುಂದರ್, ಶರಣ್ ಕುಮಾರ್, ಶ್ರೀಪತಿ ಭಟ್ ಮುಂತಾದವರು ಉಪಸ್ಥಿತರಿದ್ದರು.


Spread the love