ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶತ ವೀಣಾ ವಲ್ಲರಿ ಕಾರ್ಯಕ್ರಮ

Spread the love

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶತ ವೀಣಾ ವಲ್ಲರಿ ಕಾರ್ಯಕ್ರಮ

ಉಡುಪಿ: ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲದಲ್ಲಿ ಶುಕ್ರವಾರ ಉಚ್ಚಿಲ ದಸರಾ ಪ್ರಯುಕ್ತ ಏಕಕಾಲದಲ್ಲಿ ನೂರು ವೀಣಾ ವಾದನ ಶತ ವೀಣಾ ವಲ್ಲರಿ ಕಾರ್ಯಕ್ರಮ ಜರುಗಿತು.

ಮಣಿಪಾಲದ ವಿ|| ಪವನ ಬಿ ಆಚಾರ್ ಅವರ ನಿರ್ದೇಶನ ಮತ್ತು ನಿರ್ವಣೆಯೊಂದಿಗೆ ನಡೆದಿ ವೀಣಾ ವಾದನದಲ್ಲಿ ಮಣಿಪಾಲದ ಕಲಾಸ್ಪಂದನ ತಂಡದ ಜೊತೆಗೆ ಉಡುಪಿ ಮತ್ತು ಕಾರ್ಕಳ ಭಾಗದ ವೀಣಾ ವಾದಕರು ಸಾಥ್ ನೀಡಿದರು. ಸುಮಾರು 101 ವೀಣಾ ವಾದಕರೊಂದಿಗೆ 14 ಸಹಕಲಾವಿದರು ಮತ್ತು ಹಿನ್ನಲೆ ಕಲಾವಿದರು ಭಾಗಿಯಾಗಿದ್ದರು. ಸಾವಿರಾರು ಮಂದಿ ಸಂಗೀತ ಪ್ರಿಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದೇ ವೇಳೆ ವಿ|| ಪವನ ಬಿ ಆಚಾರ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ನಾಡೋಜ ಡಾ|ಜಿ ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮತ್ತಿತರರು ಉಪಸ್ಥೀತರಿದ್ದರು.


Spread the love