
ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಬಡವರ ಕಷ್ಟಕ್ಕೆ ಸ್ಪಂದಿಸುವ ಕ್ಷೇತ್ರವಾಗಲಿ – ಕೇಮಾರು ಸ್ವಾಮೀಜಿ
ಹಸಿದವರ ಹೊಟ್ಟೆ ತಣಿಸುವ ಹಾಗೂ ಬಡವರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸುವ ಉಪಕಾರ ಮನೋಭಾವನೆ ದೇವರಿಗೆ ಪ್ರೀಯವಾಗುತ್ತದೆ ಈ ನಿಟ್ಟಿನಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರವೂ ಬಡವವರ ಕಷ್ಟಕ್ಕೆ ಸ್ಪಂದಿಸುವ ದೇವಾಲಯವಾಗಲಿ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಚತುಃ ಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ದೇವಳದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇವರು ಮುಗ್ದತೆಯುಳ್ಳವರಿಗೆ ಒಲಿದು ಅನುಗ್ರಹ ಪ್ರಾಪ್ತಿ ಆಗುತ್ತದೆ. ನಾವು ಇನ್ನೊಬ್ಬರನ್ನು ಸಂತೋಷಪಡಿಸುವುದು ಖುಷಿ ನೆಮ್ಮದಿಯಿಂದ ಬದುಕುವುದಕ್ಕೆ ಅವಕಾಶ ನೀಡುವುದೇ ದೇವರ ಪೂಜೆ. ಲಕ್ಷ್ಮೀ ಒಲಿಯಬೇಕಾದರೆ ನಾರಾಯಣನಂತಹ ಗುಣ ಇರಬೇಕು. ಶಾಂತತೆ, ಮುಗ್ದದೆ ಇರಬೇಕು ಎಂದರು.
ಸಮಾಜದ ಎಲ್ಲಾ ಸಮುದಾಯವೂ ಧಾರ್ಮಿಕತೆಯ ಜೊತೆಗೆ ಸಾಮಾಜಿಕವಾಗಿ ಮೇಲೆ ಬರಬೇಕು ದೇವಸ್ಥಾನ ಧಾರ್ಮಿಕ ಭಾವನೆ ಜಾಗೃತಿಗೊಳಿಸುವ ಜೊತೆಗೆ ಯುವ ಸಮುದಾದಯದ ಆತ್ಮಶಕ್ತಿ ಜಾಗೃತಗೊಳಿಸುವ ಕೇಂದ್ರವಾಗಲಿ ಎಂದರು.
ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾಡೋಜ ಡಾ. ಜಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ದೇವಾನಂದ ಗುರಿಕಾರರು, ಬೋಳೂರು ಕಾಪು ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಕಲ್ಯ ರಮೇಶ ಹೆಗ್ಡೆ, ಎರ್ಮಾಳ್ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು ಪಡುಬಿದ್ರಿ ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ವೈ ಎನ್ ರಾಮಚಂದ್ರ ರಾವ್, ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರತ್ನಾಕರ ರಾಜ್ ಕನ್ಯಕ್ಕ ಬಲ್ಲಾಳ್, ಮಣಿಪಾಲ ಶ್ರೀ ಬಬ್ಬು ಸ್ವಾಮಿ ಕ್ಷೇತ್ರದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ ಎನ್ ಶಂಕರ ಪೂಜಾರಿ, ಹಾಗೂ ಇತರರು ಉಪಸ್ಥಿತರಿದ್ದರು.
ಉಚ್ಚಿಲ ದೇವಳದ ಜೀರ್ಣೋಧ್ದಾರ ಸಮಿತಿ ಕಾರ್ಯದರ್ಶಿ ಶಂಕರ್ ಸಾಲ್ಯಾನ್ ವಂದಿಸಿದರು ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.