
Spread the love
ಉಡುಪಿಗೆ ಆಗಮಿಸಿದ್ದ ಸ್ಯಾಂಟ್ರೋ ರವಿ, ಗೂಡಂಗಡಿ ಮಾಲಿಕನ ವಿಚಾರಣೆ ನಡೆಸಿದ ಮೈಸೂರು ಪೊಲೀಸರು !
ಉಡುಪಿ: ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿದ ‘ಸ್ಯಾಂಟ್ರೋ ರವಿ’ಯ ಪ್ರಕರಣದ ಹಿನ್ನಲೆಯಲ್ಲಿ ಆತ ಉಡುಪಿ ಜಿಲ್ಲೆಯಲ್ಲಿ ಭೇಟಿ ನೀಡಿದ್ದರ ಕುರಿತು ಮೈಸೂರು ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.
ಹೆಬ್ರಿಯಿಂದ ಆಗುಂಬೆ ತೆರಳುವ ರಸ್ತೆಯಲ್ಲಿರುವ ಗೂಡಂಗಡಿಯೊಂದಕ್ಕೆ ಭೇಟಿ ನೀಡಿದ್ದು ಅಂಗಡ ಮಾಲಕ ಹೆಬ್ರಿಯ ರಮೇಶ್ ಕುಲಾಲ್ ಅವರ ಬಳಿ ಮೊಬೈಲ್ ಪಡೆದು ಯಾರಿಗೋ ಕರೆ ಮಾಡಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೂರು ದಿನಗಳ ಹಿಂದೆ ಮೈಸೂರಿನ ಪೊಲೀಸರು ರಮೇಶ್ ಕುಲಾಲ್ ವಿಚಾರಣೆ ನಡೆಸಿದ್ದಲ್ಲದೆ ಆತನ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
Spread the love