ಉಡುಪಿಗೆ ಸರಿಯಾಗಿ ಕುಡಿಯುವ ನೀರನ್ನು ಒದಗಿಸಲಾಗದ ಬಿಜಪಿ ಸರಕಾರಗಳು – ಪ್ರಸಾದ್ ರಾಜ್ ಕಾಂಚನ್

Spread the love

ಉಡುಪಿಗೆ ಸರಿಯಾಗಿ ಕುಡಿಯುವ ನೀರನ್ನು ಒದಗಿಸಲಾಗದ ಬಿಜಪಿ ಸರಕಾರಗಳು – ಪ್ರಸಾದ್ ರಾಜ್ ಕಾಂಚನ್

ಉಡುಪಿ‌ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಉಡುಪಿ‌ನಗರ ಭಾಗದ ಕರಂಬಳ್ಳಿ, ಕಡಿಯಾಳಿ, ಕುಂಜಿಬೆಟ್ಟು, ಬನ್ನಂಜೆ ,ಶಿರಿಬೀಡು ಇತ್ಯಾದಿ ವಾರ್ಡ್ ಗಳಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಬಿಜೆಪಿ‌ ಸರಕಾರಗಳ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದರು, ಒಳಚರಂಡಿ ನೀರು ಬಾವಿಗೆ ಸೇರಿ ಬಾವಿ ಕೆಟ್ಟು ಹೋದದನ್ನು ಈ ಸಂದರ್ಭದಲ್ಲಿ ಅನೇಕ‌ ಕಡೆ ಸ್ಥಳೀಯ ಮತದಾರರು ಪ್ರಸಾದ್ ಮುಂದೆ ತಮ್ಮ ಅಳಲು ತೋಡಿಕೊಂಡರು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್‌ಕಾಂಚನ್ ಮಾತಾಡಿ ಕಾಂಗ್ರೆಸ್ ಸರಕಾರ ಬಂದರೆ ಖಂಡಿತವಾಗಿಯೂ ಮಹಿಳೆಯರಿಗೆ ಮಾಸಿಕ ರೂ 2000, ಎಲ್ಲಾ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್, ಹಾಗೂ ಇತರ ಗ್ಯಾರಂಟಿಗಳನ್ನು ವಿವರಿಸಿದರು,

ಕೆಪಿಸಿಸಿ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ ಮಾತಾಡಿ ಬಿಜೆಪಿ ಸರಕಾರ ಮಾಡಿದ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನವು ನರಕ ಸದೃಶವಾಗಿದೆ, ಮಾಡಾಳ್ ವಿರೂಪಾಕ್ಷ ನಂತಹ ಬಿಜೆಪಿ‌ಶಾಸಕರು ಕೋಟಿ ಕೋಟಿ ಲೂಟಿ ಮಾಡುವುದರಲ್ಲೇ ನಿರತರಾಗಿದ್ದಾರೆ, ಈ ಬಿಜೆಪಿ‌ಸರಕಾರ ಸಂವೇದನೆಯನ್ನೇ ಕಳೆದುಕೊಂಡಿದೆ ಎಂದರು


Spread the love