ಉಡುಪಿಯಲ್ಲಿ ಎಂಐಟಿ ಕ್ಯಾಂಪಸ್ ನ 72 ಮಂದಿ ಸೇರಿ 113 ಜನರಿಗೆ ಕೊರೋನಾ ಪಾಸಿಟಿವ್

Spread the love

ಉಡುಪಿಯಲ್ಲಿ ಎಂಐಟಿ ಕ್ಯಾಂಪಸ್ ನ 72 ಮಂದಿ ಸೇರಿ 113 ಜನರಿಗೆ ಕೊರೋನಾ ಪಾಸಿಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನಾ 2 ನೇ ಅಲೆಯ ಭೀತಿ ಮುಂದುವರೆದಿದ್ದು ಮಾರ್ಚ್ 22 ರಂದು ಒಟ್ಟು 113 ಮಂದಿಗೆ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಸೋಮವಾರ ವರದಿಯಾದ 113 ಪ್ರಕರಣಗಳಲ್ಲಿ ಮಣಿಪಾಲ ಎಂಐಟಿ ಕ್ಯಾಂಪಸ್ ನ 72 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದ್ದು ಈ ವರೆಗೆ ಒಟ್ಟು 372 ಮಂದಿಗೆ ಕೊರೋನಾ ಸೋಂಕು ದೃಢಗೊಂಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 439ಕ್ಕೆ ಏರಿಕೆಯಾಗಿದ್ದು, ಒಟ್ಟು 24328 ಕೋವಿಡ್ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.


Spread the love