Home Mangalorean News Kannada News ಉಡುಪಿಯಲ್ಲಿ ಕೋವಿಡ್ ಮುಕ್ತರಾದ 4 ಮಂದಿ ಪೊಲೀಸ್ ಸಿಬಂದಿ ಆಸ್ಪತ್ರೆಯಿಂದ ಬಿಡುಗಡೆ

ಉಡುಪಿಯಲ್ಲಿ ಕೋವಿಡ್ ಮುಕ್ತರಾದ 4 ಮಂದಿ ಪೊಲೀಸ್ ಸಿಬಂದಿ ಆಸ್ಪತ್ರೆಯಿಂದ ಬಿಡುಗಡೆ

Spread the love

ಉಡುಪಿಯಲ್ಲಿ ಕೋವಿಡ್ ಮುಕ್ತರಾದ 4 ಮಂದಿ ಪೊಲೀಸ್ ಸಿಬಂದಿ ಆಸ್ಪತ್ರೆಯಿಂದ ಬಿಡುಗಡೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ದೃಢಗೊಂಡು ನಗರದ ಟಿ ಎಮ್ ಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾದ ನಾಲ್ವರು ಪೊಲೀಸ್ ಸಿಬಂದಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡರು.

ಕೋವಿಡ್ ನಿಂದ ಗುಣಮುಖರಾದ ನಾಲ್ವರು ಪೊಲೀಸ್ ಸಿಬಂದಿಗಳಿಗೆ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರಾಯ್ ಅವರು ಖುದ್ದಾಗಿ ಉಡುಪಿಯ ಟಿ ಎಂ ಎ ಪೈ ಕೋವಿಡ್ ಆಸ್ಪತ್ರೆಗೆ ಆಗಮಿಸಿ ಗುಣಮುಖರಾಗಿ ಮನೆಗೆ ಹೊರಟ ನಾಲ್ವರು ಪೊಲೀಸ್ ಸಿಬಂದಿಗಳಿಗೆ ಹೂಗುಚ್ಚ ಕೊಟ್ಟು ಶುಭಕೋರಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್, ಡಿ ಎಆರ್ ಡಿವೈಎಸ್ಪಿ ರಾಘವೇಂದ್ರ, ಉಡುಪಿ ನಗರ ಠಾಣಾಧಿಕಾರಿ ಸಕ್ತಿವೇಲು ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version