ಉಡುಪಿಯಲ್ಲಿ ರಾಜ್ಯಮಟ್ಟದ ‘ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ’ ಛಾಯಾಚಿತ್ರ ಸ್ಪರ್ಧೆ

Spread the love

ಉಡುಪಿಯಲ್ಲಿ ರಾಜ್ಯಮಟ್ಟದ ‘ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ’ ಛಾಯಾಚಿತ್ರ ಸ್ಪರ್ಧೆ

ಉಡುಪಿ: ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಉಡುಪಿ ವಲಯ, ನಿಕ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಪ್ರವಾಸೋಧ್ಯಮ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯ ಮಟ್ಟದ “ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ” ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ.

ಬಹುಮಾನಿತರಿಗೆ ಪ್ರಥಮ 10,000.00, ದ್ವಿತೀಯ 5,000.00, ತ್ರಿತೀಯ 3,000.00 ಹಾಗು 5 ಸಮಾಧಾನಕರ ಬಹುಮಾನಗಳು, ಆಕರ್ಷಕ ಸ್ಮರಣಿಕೆ, ವಿಶೇಷ ಉಡುಗೊರೆಗಳು ಇರಲಿದೆ.

ಸ್ಪರ್ಧೆಯ ನಿಯಮಗಳು:

 • ಪ್ರತಿ ಸ್ಪರ್ಧಿಯು ಗರಿಷ್ಠ ನಾಲ್ಕು ಛಾಯಾಚಿತ್ರಗಳನ್ನು ಕಳುಹಿಸಬಹುದು.
 • ಒಂದು ಛಾಯಾಚಿತ್ರದ ಗಾತ್ರ ಗರಿಷ್ಠ 4MB ಗಿಂತ ಹೆಚ್ಚು ಮೀರಬಾರದು.
 • ಮೊಬೈಲ್‌ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಪೋಟೋಶಾಪ್‌ನಲ್ಲಿ ತಿರುಚಲಾದ ಮತ್ತು ವಾಟರ್‌ ಮಾರ್ಕ್‌ ಇದ್ದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
 • ಒಂದು ಬಾರಿ ನೋಂದಣಿಯಾದ ಛಾಯಾಚಿತ್ರಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.
 • ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ. ಇಮೇಲ್‌ ಮೂಲಕ ಕಳುಹಿಸುವಾಗ ತಮ್ಮ ಭಾವಚಿತ್ರ, ಹೆಸರು, ವಿಳಾಸ, ದೂರವಾಣಿ ಹಾಗೂ ನೋಂದಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
 • ತೀರ್ಪುಗಾರರ ತೀರ್ಮಾನವೇ ಅಂತಿಮ. ಉಡುಪಿಯ ರಥಬೀದಿಯಲ್ಲಿ ನಡೆಯುವ ವಿಟ್ಟಪಿಂಡಿಯ ದಿನದಂದು(20-08-2022) ಸೆರೆಹಿಡಿದ ಛಾಯಾಚಿತ್ರಗಳು ಮಾತ್ರ.
 • ನೋಂದಾಯಿಸಲು ಕೊನೆಯ ದಿನಾಂಕ 17-08-2022.ನೋಂದಾಯಿಸಿದ ಎಲ್ಲಾ ಛಾಯಾಗ್ರಾಹಕರಿಗೆ ಒಂದು ಟಿ-ಶರ್ಟ್‌ ಮತ್ತು ಒಂದು ಕ್ಯಾಪ್‌ ಉಚಿತ.
 • ಛಾಯಾಚಿತ್ರವನ್ನು ಕಳುಹಿಸಲು ಕೊನೆಯ ದಿನಾಂಕ 31.08.2022ರಂದು ಪ್ರಕಟಿಸಲಾಗುವುದು. ಫಲಿತಾಂಶವನ್ನು ದಿನಾಂಕ 09.09.2022ರಂದು ಪ್ರಕಟಿಸಲಾಗುವುದು.
 • ಟಿ-ಶರ್ಟ್‌ ಧರಿಸಿಯೇ ಛಾಯಾಗ್ರಹಣವನ್ನು ಮಾಡತಕ್ಕದ್ದು.
 • ಸ್ಪರ್ಧೆಗೆ ಬಂದ ಛಾಯಾಚಿತ್ರವನ್ನು ಯಾವುದೇ ಪೂರ್ವಾನುಮತಿ ಇಲ್ಲದೆ ಬಳಸುವ ಹಕ್ಕನ್ನು ಪಡೆದಿರುತ್ತದೆ.
 • ಛಾಯಾಚಿತ್ರಗಳನ್ನು ಕಳಿಸ ಬೇಕಾದ ಇಮೈಲ್ : salonskpa@gmail.com. ಸಂಪರ್ಕ: 72041 46368, 972 52363, 99646 68304. 99004 07474

Spread the love