ಉಡುಪಿಯಲ್ಲಿ ಸಾವರ್ಕರ್ ಪುತ್ಥಳಿ ಮಾಡುವುದು ಸಮಂಜಸವಲ್ಲ – ಶಾಸಕ ರಘುಪತಿ ಭಟ್

Spread the love

ಉಡುಪಿಯಲ್ಲಿ ಸಾವರ್ಕರ್ ಪುತ್ಥಳಿ ಮಾಡುವುದು ಸಮಂಜಸವಲ್ಲ – ಶಾಸಕ ರಘುಪತಿ ಭಟ್

ಉಡುಪಿ: ನಗರದಲ್ಲಿ ಸಾವರ್ಕರ್ ಪ್ರತಿಮೆ ಮಾಡುವುದು ಅಷ್ಟೊಂದು ಸಮಂಜಸ ಅಲ್ಲ ಮುಂದಿನ ದಿನಗಳಲ್ಲಿ ಸಾವರ್ಕರ್ ಪ್ರತಿಮೆಗೆ ಅವಮಾನ ವಾದರೆ ಕಷ್ಟ ಬದಲಾಗಿ ಸಾವರ್ಕರ್ ಸರ್ಕಲ್ ನಿರ್ಮಿಸುವುದು ಉತ್ತಮ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

ಅವರು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸಲು ನಗರ ಸಭೆಗೆ ಪತ್ರ ಬರೆದಿದ್ದೇನೆ. ಜನನಿಬಿಡ ಪ್ರದೇಶವಾದ ಹಳೆ ತಾಲೂಕ ಆಫೀಸ್ ಬಳಿಯ ಸರ್ಕಲ್ ಗೆ ಸಾವರ್ಕರ್ ಹೆಸರು ಇಡುವ ಬಗ್ಗೆ ಈ ಬಗ್ಗೆ ನಗರ ಸಭೆಯ ಅಧಿವೇಶನದಲ್ಲಿ ಠರಾವು ಇಡುತ್ತೇನೆ. ಈ ಬಗ್ಗೆ ಈಗಾಗಲೇ ನಗರಸಭೆಗೆ ಪತ್ರ ಬರೆದಿದ್ದು, ಮೂರ್ತಿ ನಿರ್ಮಿಸುವ ಬಗ್ಗೆ ಚರ್ಚೆ ಮಾಡಬೇಕು. ಖಂಡಿತವಾಗಿ ಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣವಾಗುತ್ತೆ. ಉಡುಪಿಯಲ್ಲಿ ವೀರ ಸಾವರ್ಕರ್ ಜೊತೆಗೆ ಅಂಬೇಡ್ಕರ್ ಸರ್ಕಲ್ ಕೂಡ ಮಾಡುತ್ತೇವೆ ಎಂದರು.

ಇತ್ತೀಚೆಗೆ ಹಿಂದೂ ಮುಖಂಡ ಯಶ ಪಾಲ ಸುವರ್ಣ ಪುತ್ತಳಿ ಸ್ಥಾಪಿಸುವುದಾಗಿ ಹೇಳಿದ್ದರು ಇದಕ್ಕಾಗಿ ಪುತ್ತಳಿ ಸ್ಥಾಪಿಸುವಂತೆ ಉಡುಪಿ ನಗರಸಭೆಗೆ ಮನವಿ ಮಾಡಿದ್ದರು. ಹಿಂದೂ ಮಹಾಸಭಾ , ಹಿಂದೂ ಜಾಗರಣ ವೇದಿಕೆ ಕೂಡ ನಗರಸಭೆಗೆ ಮನವಿ ಮಾಡಿತ್ತು


Spread the love