ಉಡುಪಿಯಲ್ಲಿ 2.4 ವರ್ಷ ಪ್ರಾಯದ ಮಗುವಿನ ಅಪಹರಣ! ದೂರು ದಾಖಲು

Spread the love

ಉಡುಪಿಯಲ್ಲಿ 2.4 ವರ್ಷ ಪ್ರಾಯದ ಮಗುವಿನ ಅಪಹರಣ! ದೂರು ದಾಖಲು

ಉಡುಪಿ: ಶೆಡ್‌ ಒಂದರಲ್ಲಿ ವಾಸವಾಗಿದ್ದ ಬಾಗಲಕೋಟೆ ಮೂಲದ ದಂಪತಿಯ ಮಗುವನ್ನು ಅಪರಿಚಿತ ವ್ಯಕ್ತಿಯೋರ್ವ ಅಪಹರಿಸಿರುವ ಕುರಿತು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಪಹರಣಕ್ಕೆ ಒಳಗಾದ ಮಗುವನ್ನು ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿಯ ಪುತ್ರ ಶಿವರಾಜ್ (2.4 ವರ್ಷ) ಎಂದು ಗುರುತಿಸಲಾಗಿದೆ.

ಭಾರತಿ ಮತ್ತು ಅರುಣ್ ದಂಪತಿಗೆ ಅವಳಿ-ಜವಳಿ ಮಕ್ಕಳಿದ್ದು, ಅದರಲ್ಲಿ ಧೀರಜ್ ಎಂಬ ಮಗುವನ್ನು ಊರಿನಲ್ಲೇ ಬಿಟ್ಟು ಶಿವರಾಜ್ ಎಂಬ ಮಗನೊಂದಿಗೆ ಇವರು ಎರಡು ತಿಂಗಳ ಹಿಂದೆ ಉಡುಪಿಗೆ ಬಂದಿದ್ದರು.

ಕ್‌ಡೌನ್‌ ಸಂದರ್ಭದಲ್ಲಿ ಈ ದಂಪತಿ ಮತ್ತು ಮಗು ಸೇರಿದಂತೆ ಹಲವು ಮಂದಿ ವಲಸ ಕಾರ್ಮಿಕರು ಕರಾವಳಿ ಬೈಪಾಸ್ ಬಳಿಯ ಶಡ್‌ನಲ್ಲಿ ಮಲಗುತ್ತಿದ್ದರು. ಇತ್ತೀಚೆಗೆ ಬಾಗಲಕೋಟೆಯ ಪರ್ಸು ಎಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬ ಈ ದಂಪತಿಗೆ ಪರಿಚಯವಾಗಿತ್ತು. ಇಂದು ಬೆಳಗ್ಗೆ ಮಗುವನ್ನು ಚಹಾ ಕುಡಿಸಿಕೊಂಡು ಬರುತ್ತೇನೆ ಎಂದು ಮಗುವನ್ನು ಕರೆದುಕೊಂಡು ಹೋದವನು ವಾಪಸ್ ಬಂದಿಲ್ಲ. ಇದೇ ವ್ಯಕ್ತಿ ತನ್ನ ಮಗುವನ್ನು ಅಪಹರಿಸಿಕೊಂಡು ಹೋಗಿರಬಹುದೆಂದು ಭಾರತಿ-ಅರುಣ್ ದಂಪತಿ ದೂರಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love