
ಉಡುಪಿಯ ವಿದ್ಯಾ ಸರಸ್ವತಿ ಅವರಿಗೆ ಪ್ರೈಡ್ ಆಫ್ ನಮ್ಮ ಬೆಂಗಳೂರು ಮಹಿಳಾ ವಿಭಾಗದ ಸಾಧನಾ ಪ್ರಶಸ್ತಿ
ಉಡುಪಿ: ಸ್ವರ್ಣ ಭಾರತ್ ಫೌಂಡೇಶನ್ ಬೆಂಗಳೂರು ವತಿಯಿಂದ ನೀಡಲ್ಪಡುವ ಪ್ರತಿಷ್ಟಿತ ಪ್ರಶಸ್ತಿಯಾದ ಪ್ರೈಡ್ ಆಫ್ ನಮ್ಮ ಬೆಂಗಳೂರು ಪ್ರಶಸ್ತಿ 2021ನ ಮಹಿಳಾ ಸಾಧನಾ ವಿಭಾಗದ ಸಾಧನಾ ಪ್ರಶಸ್ತಿಯನ್ನು ಉಡುಪಿಯ ವಿದ್ಯಾ ಸರಸ್ವತಿ ಪಡೆದಿರುತ್ತಾರೆ.
ಈ ಪ್ರಶಸ್ತಿಯನ್ನು ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು, ಭಾರತದ ಮಾಜಿ ಸಾಲಿಸಿಟರ್ ಜನರಲ್ ಮತ್ತು 2006 ರಿಂದ 2011 ರವರೆಗೆ ಕರ್ನಾಟಕ ರಾಜ್ಯಕ್ಕೆ ಲೋಕಾಯುಕ್ತ ( ಓಂಬುಡ್ಸ್‌ಮನ್ ) ಆದ ನಿಟ್ಟೆ ಸಂತೋಷ್ ಹೆಗ್ಡೆರವರ ಮೂಲಕ ಪ್ರಶಸ್ತಿಯನ್ನು ನೀಡಲಾಯಿತು.
ಈ ಪ್ರಶಸ್ತಿಯನ್ನು ಡಿಸೆಂಬರ್ 2021ನಲ್ಲಿ ಕೊಡಬೇಕಾಗಿದ್ದು. ಆದರೆ ಕೋವಿಡ್ ಸಲುವಾಗಿ ಮಾರ್ಚ್ 2 2022ರಂದು ಬೆಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕರ್ಣಾಟಕದ ಪ್ರಧಾನ ಕಛೇರಿಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾ ಸರಸ್ವತಿಯವರು ತಮ್ಮ 50ನೇ ವಯಸ್ಸಿನಲ್ಲಿ, 2021-2022ರ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ದೆಯಲ್ಲಿ ಭಾಗವಹಿಸಿ ಯೋಧ ರಾಣಿ ಆಫ್ ಮಿಸೆಸ್ ಇಂಡಿಯಾ ಕರ್ನಾಟಕ 2021 ಮತ್ತು ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಉಡುಪಿ 2021ಎಂಬ ಎರಡು ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ.