ಉಡುಪಿ‌ ಜಿಲ್ಲೆಯಲ್ಲಿ ಏರಿಕೆ ಕಂಡ ಕೊರೋನಾ – ಶುಕ್ರವಾರ (ಜ14) 497 ಮಂದಿಗೆ ಪಾಸಿಟಿವ್

Spread the love

ಉಡುಪಿ‌ ಜಿಲ್ಲೆಯಲ್ಲಿ ಏರಿಕೆ ಕಂಡ ಕೊರೋನಾ – ಶುಕ್ರವಾರ (ಜ14) 497 ಮಂದಿಗೆ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು , ಶುಕ್ರವಾರ 497 ಮಂದಿ ಪಾಸಿಟಿವ್‌ ಧೃಡಪಟ್ಟಿದೆ. ದಿನದಲ್ಲಿ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ 2335 ಕ್ಕೇರಿದೆ. ಇಂದು ದಿನದಲ್ಲಿ 76 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ದಿನದಲ್ಲಿ ಪಾಸಿಟಿವ್ ಬಂದ 497 ಮಂದಿಯಲ್ಲಿ 264 ಮಂದಿ ಪುರುಷ ರಾದರೆ 133 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 354 ಮಂದಿ ಉಡುಪಿ ತಾಲೂಕಿಗೆ ಸೇರಿದವರಾದರೆ ಕುಂದಾಪುರ ತಾಲೂಕಿನ 68 ಮಂದಿ ಹಾಗೂ ಕಾರ್ಕಳ ತಾಲೂಕಿನ 70 ಹಾಗೂ ಇತರ ಜಿಲ್ಲೆಯ 5 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಈ ಮೂರು ತಾಲೂಕುಗಳ ಪಾಸಿಟಿವಿಟಿ ಪ್ರಮಾಣ ಸದ್ಯ 10.20%, 4.33% ಹಾಗೂ 4.35% ಆಗಿದೆ. ಜಿಲ್ಲೆಯ ಪ್ರಮಾಣ 7.40% ರಲ್ಲಿದೆ.

ಇಂದು ಪಾಸಿಟಿವ್ ಬಂದ 497 ಮಂದಿಯಲ್ಲಿ 13 ಮಂದಿಯನ್ನು ಕೋವಿಡ್ ಕೇರ್‌ ಸೆಂಟರ್‌ಗೂ, 12 ಮಂದಿಯನ್ನು ಕೋವಿಡ್ ಆಸ್ಪತ್ರೆಗೂ, 10 ಮಂದಿ ಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿದ್ದು, ಉಳಿದ 462 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.


Spread the love

Leave a Reply