
ಉಡುಪಿ ಅದಿತಿ ಆರ್ಟ್ ಗ್ಯಾಲರಿಯಲ್ಲಿ ದೇವತಾ ಚಿತ್ರಕಲಾ ಪ್ರದರ್ಶನ ಉದ್ಘಾಟನೆ
ಉಡುಪಿ: ದೇವ ದೇವತೆಯರಿಗೆ ಸುಸ್ವರೂಪ ನೀಡುವ ಸ್ವಾತಂತ್ರ್ಯ ಎಲ್ಲ ಕಲಾವಿದರಿಗಿದೆ. ಆದರೆ ಮುಂದಿನ ಪೀಳಿಗೆಗೆ ಈ ಕಲೆಯನ್ನು ಹಸ್ತಾಂತರಿಸುವ ಜವಾಬ್ದಾರಿಯು ಅವರಿಗಿದೆ ಎಂದು ಮೂಡಬಿದ್ರೆ ಆಳ್ವಾಸ್ ನ ಅಧ್ಯಕ್ಷ ಡಾ.ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ಅವರು ಕಲಾವಿದೆ ಪ್ರವೀಣಾ ಮೋಹನ್ ಅವರ ಆಕ್ರಿಲಿಕ್ ಕಲಾಕೃತಿಗಳ ಪ್ರದರ್ಶನ ” ದೇವತಾ ಉದ್ಘಾಟಿಸಿ ಮಾತನಾಡಿದರು.
ಕಲಾವಿದೆ ಪ್ರವೀಣಾ ಮೋಹನ್ ಅವರದ್ದು ಸಾಂಪ್ರದಾಯಿಕ ಶೈಲಿ. ಅದ್ಭುತ ಕಲಾ ವಿನ್ಯಾಸ. ಮಾತನಾಡುವ ರೇಖೆಗಳು ದೇವತೆಗಳ ಚಿತ್ರಕ್ಕೆ ನ್ಯಾಯಒದಗಿಸಿದೆ ಎಂದರು.
ಉಜ್ವಲ್ ಸಮೂಹದ ಆಡಳಿತ ನಿರ್ದೇಶಕರಾದ ಅಜೆಯ್ ಪಿ ಶೆಟ್ಟಿ ಮಾತನಾಡಿ ಸನಾತನ ವಿಚಾರಧಾರೆಗಳ ಎಂದಿಗೂ ಪ್ರಸ್ತುತ. ಈ ಬಗ್ಗೆ ತರುಣ ಪೀಳಿಗೆ ಚಿಂತನೆ ನಡೆಸಬೇಕೆಂದರು.
ಮಂಗಳೂರಿನ ಲ್ಯಾಮಿನ್ ಫ್ರೇಮ್ಸ್ ನ ಮಾಲಕರಾದ ನರೇಂದ್ರ ಶೆಣೈ ಸ್ಮರಿಣಿಕೆ, ಸ್ಟಿಕ್ಕರ್ ಬಿಡುಗಡೆ ಮಾಡಿದರು.
ಪ್ರದರ್ಶನವು ” ಮೇ 25 ರಿಂದ ಮೇ 28 ರವರೆಗೆ ಕುಂಜಿಬೆಟ್ಟಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜರಗಲಿದೆ.
ಕಲಾವಿದೆ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.
ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ.ಕಿರಣ್ ಆಚಾರ್ಯ ಸ್ವಾಗತಿಸಿ ವಿದುಷಿ ಪ್ರತಿಮಾ ಆಚಾರ್ಯ ವಂದಿಸಿದರು. ಗ್ಯಾಲರಿಯ ಮತ್ತೋರ್ವ ವಿಶ್ವಸ್ಥ ಆಸ್ಟ್ರೊ ಮೋಹನ್ ಕಾರ್ಯಕ್ರಮ ನಿರೂಪಿಸಿದರು.