ಉಡುಪಿ: ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ 11 ಮಂದಿ ಪಿಎಫ್ ಐ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು

Spread the love

ಉಡುಪಿ: ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ 11 ಮಂದಿ ಪಿಎಫ್ ಐ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು

ಉಡುಪಿ: ಪೊಲೀಸರ ಸೂಕ್ತ ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಆರೋಪದಡಿಯಲ್ಲಿ 11 ಪಿಎಫ್ ಐ ಕಾರ್ಯಕರ್ತರ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾದೀಕ್‌ ಅಹಮ್ಮದ್‌(40), ಅಫ್ರೋಜ್‌ಕೆ (39), ಇಲಿಯಾಸ್‌ ಸಾಹೇಬ್‌(46), ಇರ್ಷಾದ್‌(37), ಫಯಾಜ್‌ ಅಹಮ್ಮದ್‌(39), ಮಹಮ್ಮದ್‌ ಅಶ್ರಫ್‌(43), ಎ. ಹಾರೂನ್‌ ರಶೀದ್‌, ಮೊಹಮ್ಮದ್‌ ಜುರೈಜ್‌ (42), ಇಶಾಕ್‌ ಕಿದ್ವಾಯಿ (30), ಶೌಕತ್‌ಅಲಿ (31), ಮಹಮ್ಮದ್‌ ಝಹೀದ್‌(24) ಇವರುಗಳನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

ಸಪ್ಟೆಂಬರ್ 22ರಂದು ಪ್ರಮೋದ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ಠಾಣೆಯಲ್ಲಿರುವಾಗ ಉಡುಪಿಯ ಡಯಾನಾ ಸರ್ಕಲ್ ಬಳಿ ಪಿ.ಎಫ್.ಐ ಕಾರ್ಯಕರ್ತರು ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿರುವ ಕುರಿತು ಮಾಹಿತಿ ದೊರೆತಿದ್ದು ಸ್ಥಳಕ್ಕೆ ತೆರಳಿದ್ದು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಸಂಘಟನೆಗಳ ಕಚೇರಿ ಹಾಗೂ ಮನೆಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪ್ರತಿಭಟನೆ ನೆಡಸುತ್ತಿರುವುದು ಕಂಡುಬಂದಿದ್ದು, ಪ್ರತಿಭಟನೆಗೆ ಯಾವುದೇ ಪರವಾನಿಗೆ ಇಲ್ಲದ ಕಾರಣ ಪ್ರತಿಭಟನಾಕಾರರನ್ನು ಸ್ಥಳದಿಂದ ಹೋಗಲು ಸೂಚನೆ ನೀಡಿದರೂ ತೆರಳದೆ ಇದ್ದ ವೇಳೆ 11 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಮುಂದಿನ ವಿಚಾರಣೆ ನಡೆಯುತ್ತಿದೆ.


Spread the love

Leave a Reply

Please enter your comment!
Please enter your name here