ಉಡುಪಿ: ಅಪಾರ್ಟ್ಮೆಂಟ್ ಕಿಟಕಿಯ ಫೋರಂನಲ್ಲಿ ಸಿಲುಕಿಕೊಂಡಿದ್ದ ವಿಶೇಷ ಚೇತನ ಬಾಲಕನ ರಕ್ಷಣೆ

Spread the love

ಉಡುಪಿ: ಅಪಾರ್ಟ್ಮೆಂಟ್ ಕಿಟಕಿಯ ಫೋರಂನಲ್ಲಿ ಸಿಲುಕಿಕೊಂಡಿದ್ದ ವಿಶೇಷ ಚೇತನ ಬಾಲಕನ ರಕ್ಷಣೆ

ಉಡುಪಿ: ಅಪಾರ್ಟ್ಮೆಂಟ್ ಕಿಟಕಿಯ ಫೋರಂನಲ್ಲಿ ಸಿಲುಕಿಕೊಂಡಿದ್ದ ವಿಶೇಷ ಚೇತನ ಬಾಲಕನನ್ನು ಅಗ್ನಿಶಾಮಕದಳದವರು ರಕ್ಷಣೆ ಮಾಡಿದ ಘಟನೆ ಉಡುಪಿ ಬ್ರಹ್ಮಗಿರಿಯಲ್ಲಿ ನಡೆದಿದೆ.

ರಕ್ಷಣೆಯಾದ ವಿಶೇಷ ಚೇತನ ಬಾಲಕನನ್ನು ಅರುಷ್ (8) ಎಂದು ಗುರುತಿಸಲಾಗಿದೆ.

ಬ್ರಹ್ಮಗಿರಿಯ ಫ್ಲ್ಯಾಟ್ ಒಂದರ 10ನೇ ಫ್ಲೋರ್ ನ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ಅಗ್ನಿಶಾಮಕ ದಳದ ಸಿಬಂದಿಗಳು 11ನೇ ಫ್ಲೋರಿನ ಬಾಲ್ಕನಿ ಮೂಲಕ ಹೊರಗಡೆ ಹೋಗಿ ರಕ್ಷಣೆ ಮಾಡಿದರು.

ಅಗ್ನಿಶಾಮಕ ದಳದ ಯಶಸ್ವಿ ಕಾರ್ಯಾಚರಣೆಯಿಂದ ಅರುಷ್ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.


Spread the love