ಉಡುಪಿ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದ ಆರ್ ಜಿ ಪಿ ಆರ್ ಎಸ್ ತಂಡ, ಕುಂದು ಕೊರತೆಗಳ ಪರಿಶೀಲನೆ

Spread the love

ಉಡುಪಿ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದ ಆರ್ ಜಿ ಪಿ ಆರ್ ಎಸ್ ತಂಡ, ಕುಂದು ಕೊರತೆಗಳ ಪರಿಶೀಲನೆ

ಉಡುಪಿ:  ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆಯು ಶನಿವಾರ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಜರಗಿತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ರವರು ಪಕ್ಷ ಸಂಘಟನೆಯ ಬಗ್ಗೆ ಮಾಹಿತಿಯನ್ನು ನೀಡಿದರು, ಕೆಪಿಸಿಸಿ ಸದಸ್ಯೆ ವೆರೋನಿಕಾ ಕರ್ನೋಲಿಯ ರವರು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷೆಯಾದ ರೋಶ್ನಿ ಒಲಿವರ್ ರವರು ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳ ಕುರಿತು ಕಾರ್ಯತಂತ್ರ ರೂಪಿಸುವ ಬಗ್ಗೆ ಮಾಹಿತಿ ನೀಡಿದರು. ಕಳೆದ ಗತ ಸಭೆಯ ವರದಿಯನ್ನು ಆರ್. ಜಿ. ಪಿ. ಆರ್. ಎಸ್. ನ ಪ್ರಧಾನ ಕಾರ್ಯದರ್ಶಿ ಅಮೃತಾ ಪೂಜಾರಿಯವರು ಮಂಡಿಸಿದರು. ಸಂಘಟನೆಯ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿರುವಂತಹ ಸಮಾಜ ಕಾರ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.

ಬೈಂದೂರು ಬ್ಲಾಕ್ ಸಂಯೋಜಕರಾದ ಶಾಂತಿ ಪಿರೇರಾ ರವರು ಸ್ವಾಗತಿಸಿದರು. ಜಿಲ್ಲಾ ಸಹ ಸಂಯೋಜಕರಾದ ಆನಂದ ಪೂಜಾರಿಯವರು ಧನ್ಯವಾದ ಸಮರ್ಪಿಸಿದರು.

ಸಭೆಯ ಬಳಿಕ ಆರ್ ಜಿ ಪಿ ಆರ್ ಎಸ್ ನ ಎಲ್ಲಾ ಸದಸ್ಯರು ಸೇರಿ ಉಡುಪಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಅಲ್ಲಿಯ ಕುಂದು ಕೊರತೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಸರಕಾರದ ಗಮನಕ್ಕೆ ತರುವ ಭರವಸೆ ನೀಡಿದರು. ಸದಸ್ಯರೆಲ್ಲರೂ ಸೇರಿ ಅಲ್ಲೇ ಭೋಜನ ಸವಿದರು.


Spread the love