ಉಡುಪಿ : ಇಳಿಮುಖವಾಗುತ್ತಿರುವ ಕೊರೋನಾ ಪಾಸಿಟಿವ್ ಸಂಖ್ಯೆ – ಜೂ7 ರಂದು 394 ಮಂದಿಗೆ ಸೋಂಕು ದೃಢ

Spread the love

ಉಡುಪಿ : ಇಳಿಮುಖವಾಗುತ್ತಿರುವ ಕೊರೋನಾ ಪಾಸಿಟಿವ್ ಸಂಖ್ಯೆ – ಜೂ7 ರಂದು 394 ಮಂದಿಗೆ ಸೋಂಕು ದೃಢ

ಉಡುಪಿ : ಜಿಲ್ಲೆಯಲ್ಲಿ ಕೊರೋನ ಎರಡನೇ ಅಲೆ ನಿಧಾನವಾಗಿ ಇಳಿಮುಖ ವಾಗುತ್ತಿರುವ ಸೂಚನೆ ಇದ್ದು, ವಾರ ಒಟ್ಟು 394 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.

ಇಂದು ಕೊರೋನಕ್ಕೆ ಇಬ್ಬರು ಮೃತಪಟ್ಟಿದ್ದು, ಈವರೆಗೆ ಬಲಿಯಾದವರ ಸಂಖ್ಯೆ 346ಕ್ಕೇರಿದೆ. ದಿನದಲ್ಲಿ 628 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 4085ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಪಾಸಿಟಿವ್ ಬಂದ 394 ಮಂದಿಯಲ್ಲಿ ಉಡುಪಿ ತಾಲೂಕಿನ 207, ಕುಂದಾಪುರ ತಾಲೂಕಿನ 110 ಹಾಗೂ ಕಾರ್ಕಳ ತಾಲೂಕಿನ 70ಮಂದಿ ಇದ್ದು, ಉಳಿದ 7 ಹೊರಜಿಲ್ಲೆಯವು. ಇವರಲ್ಲಿ 23 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 371 ಮಂದಿ ಹೋಮ್ ಐಸೋಲೆಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ನಿನ್ನೆ ಒಟ್ಟು 628 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 58248ಕ್ಕೇರಿದೆ. ನಿನ್ನೆ ಜಿಲ್ಲೆಯ 3374 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದ ವರ ಸಂಖ್ಯೆ 62679 ಆಗಿದೆ ಎಂದು ಡಾ.ಉಡುಪ ತಿಳಿಸಿದರು.


Spread the love