ಉಡುಪಿ :ಎರಡನೇ ಹಂತದ ಕೊರೋನ ನಿರೋಧಕ ಲಸಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ ಡಿಸಿ ಜಗದೀಶ್

Spread the love

ಉಡುಪಿ :ಎರಡನೇ ಹಂತದ ಕೊರೋನ ನಿರೋಧಕ ಲಸಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ ಡಿಸಿ ಜಗದೀಶ್

ಉಡುಪಿ : ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ನವೀನ್ ಭಟ್ ಅವರು ಲಸಿಕೆ ಪಡೆಯುವ ಮೂಲಕ 2ನೇ ಹಂತದ ಲಸಿಕೆ ನೀಡಿಕೆಗೆ ಚಾಲನೆ ನೀಡಿದರು.

ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ವ್ಯಾಕ್ಸಿನೇಶನ್ ಕೊಠಡಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಎ ಎಸ್ ಪಿ ಕುಮಾರ ಚಂದ್ರ, ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ನಗರಸಭೆ ಕಮಿಷನರ್ ಉದಯಕುಮಾರ್ ಶೆಟ್ಟಿ ,ಕೂಡಾ ಲಸಿಕೆ ಹಾಕಿಸಿಕೊಂಡರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಜಿ ಜಗದೀಶ್ ತಾಲೂಕಿನಲ್ಲಿ ತಹಸಿಲ್ದಾರರು, ಇಒಗಳು ವ್ಯಾಕ್ಸಿನೇಷನ್ ಪಡೆದುಕೊಳ್ಳಲಿದ್ದಾರೆ. ಮೂರು ದಿನದಲ್ಲಿ 4040 ಜನರಿಗೆ ಲಸಿಕೆ ಹಾಕಲಾಗುತ್ತದೆ. ಮೊದಲ ದಿನ 593 ಜನಕ್ಕೆ ಲಸಿಕೆ ಹಾಕಲಾಗುತ್ತದೆ. ನಾವು ಮೊದಲು ತೆಗೆದುಕೊಂಡು ಕೊರೋನಾ ರಿಸ್ಕ್ ಕಡಿಮೆ ಮಾಡಬೇಕು. ಅಧಿಕಾರಿ ವರ್ಗ ಆರೋಗ್ಯವಾಗಿದ್ದು ರೋಗದ ವಿರುದ್ಧದ ಹೋರಾಟಕ್ಕೆ ಸಿದ್ಧವಾಗಿರಬೇಕು ಎಂಬ ಹಿನ್ನೆಲೆಯಲ್ಲಿ ನಾವೇ ಲಸಿಕೆ ಹಾಕಿಸಿಕೊಂಡಿದ್ದೇವೆ. ಇಂಜೆಕ್ಷನ್ ತೆಗೆದಕೊಂಡ ಮೇಲೆ ಯಾವುದೇ ವ್ಯತ್ಯಾಸ ಆಗಿಲ್ಲ. ಯಾರೂ ಲಸಿಕೆ ಪಡೆಯಲು ಹಿಂಜರಿಯೋದು ಬೇಡ. ಕೊರೋನಾದ ರಿಸ್ಕ್ ಗೆ ಹೋಲಿಸಿದ್ರೆ ಪಾಯಿಂಟ್ 1 % ರಿಸ್ಕ್ ಇಲ್ಲ ಎಂದು ಹೇಳಿದರು.

ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ ಕೊರೋನಾ ಬಂದವರಿಗೆ , ಅವರ ಕುಟುಂಬಕ್ಕೆ ಲಸಿಕೆಯ ಬೆಲೆ ಗೊತ್ತಿರುತ್ತದೆ. ಕೋರೋನಾ ನಿವಾರಣೆಯಾಗಿದೆ ಎಂಬ ಮನೋಭಾವನೆಯಲ್ಲಿ ಜನ ಇದ್ದಾರೆ. ಆದರೆ ಕೊರೋನ ರೂಪಾಂತರ ಆಗುವ ಸಾಧ್ಯತೆ. ಇದೇ ಎಚ್ಚರಿಕೆ ಗೋಸ್ಕರ ಲಸಿಕೆಯನ್ನು ಪಡೆದುಕೊಳ್ಳಲೇಬೇಕು. ಸರ್ಕಾರದಿಂದ ಉಚಿತ ಲಸಿಕೆ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಹೇಳಿದರು.

ಕೊರೊನಾ ಲಸಿಕೆ ತೆಗೆದುಕೊಳ್ಳಲು ಯಾರು ಹಿಂಜರಿಯುವ ಅವಶ್ಯಕತೆ ಇಲ್ಲ. ಕೊರೋನಾ ಸಾಂಕ್ರಾಮಿಕ ದ ವಿರುದ್ಧ ಹೋರಾಡುವ ಫ್ರಂಟ್ ಲೈನ್ ವರ್ಕರ್ಸ್ ಎಲ್ಲರೂ ಆತಂಕವಿಲ್ಲದೆ ಲಸಿಕೆ ತೆಗೆದುಕೊಳ್ಳಿ ಎಂದು ಎಎಸ್ ಪಿ ಕುಮಾರ ಚಂದ್ರ ಕರೆಕೊಟ್ಟರು.


Spread the love