ಉಡುಪಿ: ಒಂಟಿ ವೃದ್ದ ಮಹಿಳೆಯ ಕೊಲೆ ಆರೋಪಿಗಳಿಗೆ 7 ವರ್ಷ ಕಾರಾಗೃಹ ಶಿಕ್ಷೆ

Spread the love

ಉಡುಪಿ: ಒಂಟಿ ವೃದ್ದ ಮಹಿಳೆಯ ಕೊಲೆ ಆರೋಪಿಗಳಿಗೆ 7 ವರ್ಷ ಕಾರಾಗೃಹ ಶಿಕ್ಷೆ

ಉಡುಪಿ: ಒಂಟಿ ವೃದ್ದ ಮಹಿಳೆಯಿದ್ದ ಮನೆಗೆ ಬಾಡಿಗೆಗಾಗಿ ಬಂದು ಆಕೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿಕೊಂಡು ಹೋಗಿದ್ದ ಆರೋಪಿಗಳಿಗೆ ಉಡುಪಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

2019 ಜುಲೈ 2 ರಂದು ಉಡುಪಿ ಸುಬ್ರಹ್ಮಣ್ಯ ನಗರದ ರತ್ನಾವತಿ ಜಿ ಶೆಟ್ಟಿ (80) ಎಂಬ ಮಹಿಳೆಯನ್ನು ಧಾರಾವಾಡ ನಿವಾಸಿಗಳಾದ ಅಂಬಣ್ಣ @ ಅಂಬರೀಶ್ ಬಸಪ್ಪ ಜಾಡರ್ @ ಶಿವ (31) ಮತ್ತು ರಶೀದಾ @ಜ್ಯೋತಿ (26) ಎಂಬವರು ಕೊಲೆ ಮಾಡಿ ಮನೆಯಲ್ಲಿದ್ದ ರೂಪಾಯಿ 1,95,000/- ಮೌಲ್ಯ ಬೆಲೆಬಾಳುವ ಚಿನ್ನಾಭರಣ ಹಾಗೂ ಮೊಬೈಲ್ ನ್ನು ದೋಚಿಕೊಂಡು ಹೋಗಿದ್ದು, ಈ ಬಗ್ಗೆ 2019 ಜುಲೈ 5 ರಂದು 3 ದಿನ ತಡವಾಗಿ ಪ್ರಕರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಒಂಟಿಯಾಗಿ ವಾಸವಿದ್ದ ಶ್ರೀಮತಿ ರತ್ನಾವತಿ ಜಿ ಶೆಟ್ಟಿಯವರು ಯಾರೋ ಪರಿಚಯವಿಲ್ಲದ ದಂಪತಿಗಾಗಿ ಮನೆಯನ್ನು ಬಾಡಿಗೆ ಕೊಟ್ಟಿದ್ದು, ಬಾಡಿಗೆ ಬಂದ ಮರುದಿನವೇ ಅವರುಗಳು ಮನೆಯ ಹಿಂದಿನ ಬಾಗಿಲಿನಿಂದ ಪ್ರವೇಶ ಮಾಡಿ ರತ್ನಾವತಿ ಜಿ ಶೆಟ್ಟಿಯವರನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿ, ಆಭರಣಗಳನ್ನು ದೋಚಿದ್ದರು.

ನಂತರ ಈ ಪ್ರಕರಣದ ತನಿಖೆಯನ್ನು ಅಂದಿನ ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ ರವರು ತನಿಖೆಯನ್ನು ನಡೆಸಿ ಆರೋಪಿಗಳನ್ನು ಗೋವಾದಲ್ಲಿ ಪತ್ತೆ ಮಾಡಿ ಸುಲಿಗೆಯಾಗಿದ್ದ ಬಂಗಾರದ ಒಡವೆಗಳನ್ನು ಆರೋಪಿಗಳಿಂದ ಜಪ್ತಿ ಮಾಡಿ, ತನಿಖೆ ಕೈಗೊಂಡು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೊಷಾರೋಪಣಾ ಪತ್ರ ಸಲ್ಲಿಸಿದ್ದರು

ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯವು ಕಲಂ: 302 ಐಪಿಸಿ ಗೆ ಜೀವಾವಧಿ ಹಾಗೂ ರೂಪಾಯಿ 50,000/- ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷಕ್ಕೆ ವಿಸ್ತಾರವಾಗುವಂತೆ ಕಾರಾಗೃಹ ಶಿಕ್ಷೆ ವಿಧಿಸಲಾಗಿದ್ದು, ಕಲಂ: 392 ಐಪಿಸಿ ಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂಪಾಯಿ 10,000/- ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳಿಗೆ ವಿಸ್ತಾರವಾಗುವಂತೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿರುತ್ತದೆ. ಕಲಂ: 397 ಐಪಿಸಿ ಗೆ 7 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ ಕಲಂ: 201 ಐಪಿಸಿ ಗೆ 6 ತಿಂಗಳುಗಳ ಸರಳ ಕಾರಾಗೃಹ ವಾಸ ಹಾಗೂ ತಲಾ ರೂಪಾಯಿ 2000/- ದಂಡ, ದಂಡ ಪಾವತಿಸಲು ವಿಫಲವಾದಲ್ಲಿ 3 ತಿಂಗಳುಗಳ ಕಾಲ ಸರಳ ಕಾರಾಗೃಹ ವಾಸ ಶಿಕ್ಷೆ ವಿಧಿಸಿ, ಉಡುಪಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ರವರು ತೀರ್ಪು ನೀಡಿರುತ್ತಾರೆ.

ಪ್ರಾಸಿಕ್ಯೂಶನ್ ಪರವಾಗಿ ಶಾಂತಿಬಾಯಿ ಹಾಗೂ ಜಯರಾಮ ಶೆಟ್ಟಿರವರು ವಾದ ಮಂಡನೆಯನ್ನು ಮಾಡಿರುತ್ತಾರೆ.
.
ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ತೀರ್ಪಿನಿಂದ ಮೃತೆ ರತ್ನಾವತಿ ಜಿ ಶೆಟ್ಟಿ ರವರ ಕುಟುಂಬಸ್ಥರು, ಹಿತೈಷಿಗಳು ಹಾಗೂ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆರವರು ಇಲಾಖೆಯ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ


Spread the love

Leave a Reply

Please enter your comment!
Please enter your name here