
ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಗೆ ಬೆಂಬಲ ಸೂಚಿಸಿದ ಎಸ್.ಡಿ.ಪಿ.ಐ!
ಉಡುಪಿ: ಎಸ್ ಡಿ ಪಿ ಐ ಸಂಘಟನೆ ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಬೆಂಬಲ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧಿಸುತ್ತೇವೆ ಎನ್ನುವ ಮಾತು ಹೊರ ಬೀಳುತಿದ್ದಂತೆ ಮತೀಯ ಸಂಘಟನೆಗಳು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದು ಇತ್ತ ಉಡುಪಿಯಲ್ಲಿ ಮೊದಲಿನಿಂದಲೂ ಹೊಂದಾಣಿಕೆ ಸುದ್ದಿಯಲ್ಲಿದ್ದ ಕಾಂಗ್ರೆಸ್ ಎಸ್.ಡಿ.ಪಿ.ಐ.ಮೈತ್ರಿ ಮಾಡಲು ನಾಳೆ ಶುಕ್ರವಾರ ಮಸೀದಿಯಲ್ಲಿ ಮೌಲ್ವಿಗಳ ನೇತೃತ್ವದಲ್ಲಿ ಶುಕ್ರವಾರದ ಪ್ರಾರ್ಥನೆ ನಂತರ ಉಡುಪಿ ಕ್ಷೇತ್ರದ ಪುರಸಭೆ ಮತ್ತು ತಾಲೂಕಿನ ಎಲ್ಲಾ ಮಸೀದಿಯಲ್ಲಿ ಕಾಂಗ್ರೆಸ್ಸಿಗೆ ಎಲ್ಲಾ ಮುಸ್ಲಿಂ ಸಮುದಾಯ ಬೆಂಬಲ ಸೂಚಿಸಲು ಸಮಯ ನಿಗದಿ ಉಡುಪಿ ಕಾಂಗ್ರೆಸ್ ಮುಸ್ಲಿಂ ಮತದ ಆಸೆಯನ್ನು ಜೀವಂತ ಗೊಳಿಸಲು ಸಾಕಷ್ಟು ಶ್ರಮಿಸಿದ್ದು ಯಶಸ್ವಿ ಯಾಗಿದೆ ಎಂದು ತಿಳಿದು ಬಂದಿದೆ.
ಹಿಜಾಬ್ ವಿವಾದ ಸಂದರ್ಭದಲ್ಲಿ ಮತೀಯವಾದಿ ಮತಾಂಧ ಜಿಹಾದಿಗಳ ವಿರುದ್ಧ ಗಟ್ಟಿ ಧ್ವನಿಯಾಗಿ ಬಡ ವಿದ್ಯಾರ್ಥಿನಿಯರ ಪರ ನಿಂತು ಸಿ ಎಫ್ ಐ, ಎಸ್ ಡಿ ಪಿ ಐ ಸಂಘಟನೆಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ ಯಶ್ಪಾಲ್ ಸುವರ್ಣರ ಸೋಲಿಗೆ ಪಣತೊಟ್ಟ ಎಸ್ ಡಿ ಪಿ ಐ ಉಡುಪಿ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷ ಬೆಂಬಲ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರಿಗೆ ನೀಡಿದೆ.